ಕರ್ನಾಟಕ

karnataka

ETV Bharat / bharat

ಕೋಲ್ಕತ್ತಾಗೆ ಬಂದಿಳಿದ ಪ್ರಧಾನಿಗೆ ಪ್ರತಿಭಟನೆಯ ಸ್ವಾಗತ.. ರಾಜಭವನದಲ್ಲಿ ದೀದಿ-ಮೋದಿ! - ಮೋದಿ ಮಮತ ಬ್ಯಾನರ್ಜಿ ಭೇಟಿ

2 ದಿನಗಳ ಭೇಟಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕೋಲ್ಕತ್ತಾಗೆ ಆಗಮಿಸಿದ್ದಾರೆ. ಆದರೆ, ಹಲವು ಸಂಘಟನೆಗಳು ಮೋದಿ ಭೇಟಿ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ.

mamata banerjee modi meeting, ದೀದಿ ಜೊತೆ ಮೋದಿ ಚರ್ಚೆ
ದೀದಿ ಜೊತೆ ಮೋದಿ ಚರ್ಚೆ

By

Published : Jan 11, 2020, 5:07 PM IST

ಕೋಲ್ಕತ್ತಾ:ಎರಡು ದಿನಗಳ ಕಾಲ ಪಶ್ಚಿಮ ಬಂಗಾಳ ಪ್ರವಾಸ ಕೈ ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಕೋಲ್ಕತ್ತಾ ನಗರಕ್ಕೆ ಬಂದಿಳಿದಿದ್ದಾರೆ.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಪ್ರಧಾನಿ ಮೋದಿ ರಾಜ ಭವನದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮೋದಿ ಭೇಟಿ ನಂತರ ಟಿಎಂಸಿ ವಿದ್ಯಾರ್ಥಿ ಸಂಘಟನೆ ಹಮ್ಮಿಕೊಂಡಿರುವ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ದೀದಿ ಭಾಗಿಯಾಗಲಿದ್ದಾರೆ.

ಇದೇ ವೇಳೆ ಕೋಲ್ಕತ್ತಾ ಬಂದರಿನ 150ನೇ ವಾರ್ಷಿಕೋತ್ಸವದಲ್ಲಿ ಮೋದಿ ಭಾಗವಹಿಸಲಿದ್ದಾರೆ. ಇತ್ತ ಮೋದಿ ಆಗಮನ ಹಿನ್ನೆಲೆಯಲ್ಲಿ ಎಡ ಪಕ್ಷಗಳೊಂದಿಗೆ ಸಂಬಂಧ ಹೊಂದಿರುವವರು ಸೇರಿ ಹಲವಾರು ಸಂಘಟನೆಗಳು ಮೋದಿ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ.

ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ..

ವಿಮಾನ ನಿಲ್ದಾಣದ ಸಮೀಪ ಜಮಾಯಿಸಿದ್ದ ಕೆಲ ಪ್ರತಿಭಟನಾಕಾರರು ಮೋದಿ ವಿರುದ್ದ ಘೋಷಣೆ ಕೂಗಿದ್ದಾರೆ. ಪ್ರತಿಭಟನೆಯ ಕಾವು ಹೆಚ್ಚಿರಿವುದರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಬಗ್ಗೆ ಮಾತನಾಡಿರುವ ಅಧಿಕಾರಿಗಳು, ನಾವು ಪ್ರಧಾನಮಂತ್ರಿ ಭೇಟಿಗೆ ಉತ್ತಮ ಭದ್ರತಾ ವ್ಯವಸ್ಥೆಗಳನ್ನು ಯೋಜಿಸಿದ್ದೇವೆ. ರಸ್ತೆಗಳ ಉದ್ದಕ್ಕೂ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಹೆಚ್ಚುವರಿ ಭದ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಸಿಎಎ ಮತ್ತು ಎನ್‌ಆರ್‌ಸಿ ವಿಷಯದ ಕುರಿತು ಮೋದಿಯವರ ಭೇಟಿಯ ಸಂದರ್ಭದಲ್ಲಿ ಕಾಂಗ್ರೆಸ್, ಎಡರಂಗ ಮತ್ತು ಇತರೆ ರಾಜಕೀಯ ಪಕ್ಷಗಳು ರಾಜ್ಯಾದ್ಯಂತ ಪ್ರತಿಭಟನಾ ರ್ಯಾಲಿಗಳನ್ನು ನಡೆಸುತ್ತಿವೆ.

ABOUT THE AUTHOR

...view details