ಕರ್ನಾಟಕ

karnataka

ETV Bharat / bharat

ಕೆಂಪು ಕೋಟೆಯಲ್ಲಿ ನಮೋ 7ನೇ ಬಾರಿ ಧ್ವಜಾರೋಹಣ... ಮೋದಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ವಿವರ!

ಸ್ವಾತಂತ್ರ್ಯೋತ್ಸವ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದು, ಅವರ ಇಂದಿನ ಕಾರ್ಯಕ್ರಮದ ವಿವರ ಇಂತಿದೆ.

PM to address nation
PM to address nation

By

Published : Aug 15, 2020, 3:55 AM IST

Updated : Aug 15, 2020, 6:01 AM IST

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​ ಭೀತಿ ನಡುವೆ ದೇಶಾದ್ಯಂತ 74ನೇ ಸ್ವಾತಂತ್ರ್ಯೋವದ ಸಡಗರ-ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ದೆಹಲಿಯ ಕೆಂಪು ಕೋಟೆ ಮೇಲೆ ಧ್ವಜಾರೋಹಣ ಮಾಡಲಿದ್ದಾರೆ.

ಪ್ರತಿ ಸಲದಂತೆ ಈ ಬಾರಿ ಅದ್ಧೂರಿ ಕಾರ್ಯಕ್ರಮ ಆಯೋಜನೆ ಮಾಡಿಲ್ಲ. ಆದರೂ ಕೆಂಪುಕೋಟೆಯಲ್ಲಿ ಪ್ರಮುಖ ಆಶಯದೊಂದಿಗೆ ನಮೋ ಧ್ವಜಾರೋಹಣ ಮಾಡಲಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿ 2 ಕೊರೊನಾ ಲಸಿಕೆ ಘೋಷಿಸಿದರೂ ಅಚ್ಚರಿಯಿಲ್ಲ: ಇಲ್ಲಿದೆ ಲಾಜಿಕ್​!

ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆ ಮೇಲೆ ಸತತ ಏಳನೇ ಬಾರಿಗೆ ಧ್ವಜಾರೋಹಣ ಮಾಡಿ, ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಎರಡನೇ ಅವಧಿಯಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ನಮೋ ಮಾಡುತ್ತಿರುವ ಎರಡನೇ ಭಾಷಣ ಇದಾಗಿದೆ.

ನಮೋ ಸ್ವಾತಂತ್ರ್ಯ ಕಾರ್ಯಕ್ರಮದ ವಿವರ ಇಂತಿದೆ

  • ಬೆಳಗ್ಗೆ 7 ಗಂಟೆಗೆ ರಾಜ್​ಘಾಟ್​ಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ
  • ಬೆಳಗ್ಗೆ 7:18ಕ್ಕೆ ಲಾಹೋರ್​​ ಗೇಟ್​ ಮೂಲಕ ಐತಿಹಾಸಿಕ ಕೆಂಪುಕೋಟೆ ಪ್ರವೇಶ, ಕೆಂಪುಕೋಟೆಗೆ ಬರುತ್ತಿದ್ದಂತೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹಾಗೂ ರಕ್ಷಣಾ ಇಲಾಖೆ ಕಾರ್ಯದರ್ಶಿಯಿಂದ ಸ್ವಾಗತ
  • ರಕ್ಷಣಾ ಕಾರ್ಯದರ್ಶಿಯಿಂದ ಪ್ರಧಾನಿ ಮೋದಿಗೆ ಜನರಲ್​ ಆಫೀಸರ್​ ಕಮಾಂಡಿಂಗ್​ ಲೆ.ಜ ವಿಜಯ್​ ಕುಮಾರ್​ ಅವರ ಪರಿಚಯ
  • ಪೊಲೀಸ್​ ಗಾರ್ಡ್​, ಇಂಟರ್​ ಸರ್ವೀಸ್​​​ಗಳಿಂದ ಪ್ರಧಾನಿ ಮೋದಿಗೆ ಸಲ್ಯೂಟ್​, ವಾಯುಸೇನೆ, ಭೂಸೇನೆ ಹಾಗೂ ನೌಕಾಸೇನೆಯಿಂದ ನಮೋಗೆ ಗಾರ್ಡ್​ ಆಫ್​ ಹಾನರ್​
  • ಗಾರ್ಡ್​ ಆಫ್​ ಹಾನರ್​ ಬಳಿಕ ಪ್ರಧಾನಿ ಮೋದಿಯಿಂದ ಕೆಂಪುಕೋಟೆಯಲ್ಲಿ ಧ್ವಜಾರೋಹಣ
  • ಧ್ವಜಾರೋಹಣದ ಬಳಿಕ ಸೇನಾಧಿಕಾರಿಗಳು, ಗಾರ್ಡ್​ ಆಫ್​ ಹಾನರ್​ ನೀಡಿದ ಸೇನಾ ತುಕಡಿಯಿಂದ ರಾಷ್ಟ್ರಧ್ವಜಕ್ಕೆ ಸಲ್ಯೂಟ್​
  • ಮಿಲಿಟರಿ ಬ್ಯಾಂಡ್​ನಿಂದ ರಾಷ್ಟ್ರಗೀತೆ
  • ಧ್ವಜಾರೋಹಣ ಗೌರವ ಸಮರ್ಪಣೆ ಬಳಿಕ ನಮೋ ದೇಶವನ್ನುದ್ದೇಶಿಸಿ ಭಾಷಣ(7:30ಕ್ಕೆ)
  • ಭಾಷಣದ ಬಳಿಕ ಕೆಂಪುಕೋಟೆಯಿಂದ ನಮೋ ಬಿಳ್ಕೋಡುಗೆ
Last Updated : Aug 15, 2020, 6:01 AM IST

ABOUT THE AUTHOR

...view details