ಭೋಪಾಲ್ (ಮಧ್ಯಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದ ಪಿಎಂ ಸ್ಟ್ರೀಟ್ ಮಾರಾಟಗಾರರ ಆತ್ಮ ನಿರ್ಭರ ನಿಧಿ (ಪಿಎಂ ಎಸ್ವಿಎ ನಿಧಿ) ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ, ಕುಡಿಯುವ ನೀರಿಗಾಗಿ ಪ್ಲಾಸ್ಟಿಕ್ ಬಾಟಲಿಗಳ ಬದಲು ಮಣ್ಣಿನ ಹೂಜಿಗಳನ್ನು ಬಳಸಬೇಕೆಂದು ಒತ್ತಿ ಹೇಳಿದರು.
ಇಂದೋರ್ ಜಿಲ್ಲೆಯ ಸ್ಯಾನ್ವರ್ ಮೂಲದ ಬೀದಿ ವ್ಯಾಪಾರಿ ಚಗನ್ ಲಾಲ್ ಮತ್ತು ಅವರ ಪತ್ನಿ, ಗ್ವಾಲಿಯರ್‌ನ ಅರ್ಚನಾ ಶರ್ಮಾ ಮತ್ತು ರೈಸನ್ ಜಿಲ್ಲೆಯ ತರಕಾರಿ ಮಾರಾಟಗಾ ದಾಲ್ಚಂದ್ ಅವರೊಂದಿಗೆ ಮೋದಿ ವರ್ಚುವಲ್ ಸಂವಹನ ನಡೆಸಿದರು.
ಪೊರಕೆ ತಯಾರಿಸುವ ವೆಚ್ಚವನ್ನು ಕಡಿಮೆ ಮಾಡಲು, ಪೊರಕೆ ತಯಾರಿಸಲು ಬಳಸಿದ ಪೈಪ್ಅನ್ನು ಹಿಂದಿರುಗಿಸುವಂತೆ ಗ್ರಾಹಕರನ್ನು ಕೇಳುವ ಮೂಲಕ ತಮ್ಮ ವ್ಯವಹಾರವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಮೋದಿ ಚಗನ್ ಲಾಲ್ಗೆ ಸಲಹೆ ನೀಡಿದರು.
ಪರಿಸರ ಉಳಿಸಲು ಕುಡಿಯುವ ನೀರಿಗಾಗಿ ಪ್ಲಾಸ್ಟಿಕ್ ಬಾಟಲಿಯ ಬದಲಾಗಿ ಮಣ್ಣಿನ ಹೂಜಿ ಬಳಸುವಂತೆ ಪ್ರಧಾನಿ ಸಲಹೆ ನೀಡಿದರು. ಉಜ್ವಲ ಯೋಜನೆ ಅವರ ಕುಟುಂಬಕ್ಕೆ ಹೇಗೆ ಪ್ರಯೋಜನ ನೀಡಿತು ಎಂದು ಕೇಳಿ ತಿಳಿದುಕೊಂಡರು.