ಕರ್ನಾಟಕ

karnataka

ETV Bharat / bharat

ಜಲಿಯನ್​ ವಾಲಾಬಾಗ್ ಹತ್ಯಾಕಾಂಡಕ್ಕೆ 101 ವರ್ಷ; ಪ್ರಧಾನಿಯಿಂದ ಹುತಾತ್ಮರ ಸ್ಮರಣೆ

''ಜಲಿಯನ್ ವಾಲಾಬಾಗ್ ದುರಂತದಲ್ಲಿ ನಿರ್ದಯವಾಗಿ ಕೊಲ್ಲಲ್ಪಟ್ಟ ಹುತಾತ್ಮರಿಗೆ ನಾನು ನಮಸ್ಕರಿಸುತ್ತೇನೆ. ಅವರ ಧೈರ್ಯ, ತ್ಯಾಗವನ್ನು ನಾವೆಂದಿಗೂ ಮರೆಯುವುದಿಲ್ಲ''.

pm-remembers-martyrs-of-jallianwalabagh-massacre
ಪ್ರಧಾನಿಯಿಂದ ಹುತಾತ್ಮರ ಸ್ಮರಣೆ

By

Published : Apr 13, 2020, 11:01 AM IST

Updated : Apr 13, 2020, 11:31 AM IST

ನವದೆಹಲಿ:1919 ರಲ್ಲಿ ಪಂಜಾಬ್ ಅಮೃತಸರದಲ್ಲಿ ನಡೆದ ಅತ್ಯಂತ ಘೋರ ಎನ್ನಲಾದ ಜಲಿಯನ್​ ವಾಲಾಬಾಗ್ ಹತ್ಯಾಕಾಂಡದ ಹುತಾತ್ಮರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದು, ಅವರ ಶೌರ್ಯವು ಭಾರತೀಯರಿಗೆ ಸ್ಫೂರ್ತಿ ಎಂದು ಕೊಂಡಾಡಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಪ್ರಧಾನಿ, "ಜಲಿಯನ್ ವಾಲಾಬಾಗ್ ದುರಂತದಲ್ಲಿ ನಿರ್ದಯವಾಗಿ ಕೊಲ್ಲಲ್ಪಟ್ಟ ಹುತಾತ್ಮರಿಗೆ ನಾನು ನಮಸ್ಕರಿಸುತ್ತೇನೆ. ಅವರ ಧೈರ್ಯ, ತ್ಯಾಗವನ್ನು ನಾವೆಂದಿಗೂ ಮರೆಯುವುದಿಲ್ಲ" ಎಂದಿದ್ದಾರೆ.

ನಿರ್ದಯಿ ಹತ್ಯಾಕಾಂಡದ ಆ ದಿನ:

1919 ಏಪ್ರಿಲ್​​​ 13 ರಂದು ಸುಗ್ಗಿಯ ಬೈಸಾಖಿ ಹಬ್ಬಾಚರಿಸಲು ಸಾವಿರಾರು ಭಾರತೀಯರು ಪಂಜಾಬ್​​ನ ಅಮೃತಸರದ ಜಲಿಯನ್​ ವಾಲಾಬಾಗ್‌ ಪಾರ್ಕ್​​ನಲ್ಲಿ ಸೇರಿದ್ದರು. ಈ ವೇಳೆ ಬ್ರಿಟೀಷ್ ಜನರಲ್​ ಡಯರ್,​ ನೆರೆದಿದ್ದ ಜನರ ಮೇಲೆ ತನ್ನ ಬಂದೂಕಿನಿಂದ ಗುಂಡಿನ ಮಳೆಗರೆದನು. ಈ ಘಟನೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಭಾರತೀಯರು ಹುತಾತ್ಮರಾದರು. ಸಾವಿರಾರು ಮಂದಿ ಗಾಯಗೊಂಡರು. ಇದು ಭಾರತದ ಇತಿಹಾಸದಲ್ಲಿ ನಡೆದ ಅತ್ಯಂತ ನಿರ್ದಯಿ ಹತ್ಯಾಕಾಂಡ.

Last Updated : Apr 13, 2020, 11:31 AM IST

ABOUT THE AUTHOR

...view details