ಕರ್ನಾಟಕ

karnataka

ETV Bharat / bharat

ಮೋದಿಯಿಂದ ರಫೇಲ್​ ಡೀಲ್​ಗೆ​​ ಬೈಪಾಸ್​​​ ಸರ್ಜರಿ: ರಾಹುಲ್​ ಟೀಕೆ - ರಾಹುಲ್ ಗಾಂಧಿ

ಪ್ರಧಾನಿ ಮೋದಿ ರಫೇಲ್​ ಡೀಲ್​ಗೆ ಬೈಪಾಸ್ ಸರ್ಜರಿ ಮಾಡಿದ್ದಾರೆ. ಕಳವು ಪ್ರಕರಣ ಸಂಬಂಧ ಸೂಕ್ತ ತನಿಖೆಯಾಗಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ರಾಹುಲ್ ಗಾಂಧಿ

By

Published : Mar 7, 2019, 3:12 PM IST

ನವದೆಹಲಿ: ಬುಧವಾರದಂದು ಸುಪ್ರೀಂ ಕೋರ್ಟ್​ನಲ್ಲಿ ರಫೇಲ್ ತೀರ್ಪಿನ ಮೇಲ್ಮನವಿ ವೇಳೆ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ಕಳ್ಳತನವಾಗಿವೆ ಎನ್ನುವ ವಿಚಾರವನ್ನು ಕೇಂದ್ರ ಹೇಳಿದ್ದಕ್ಕೆ ರಾಹುಲ್ ಗಾಂಧಿ ಮತ್ತೆ ಗುಡುಗಿದ್ದಾರೆ.

ಅನಿಲ್ ಅಂಬಾನಿ ಲಾಭಕ್ಕಾಗಿ ರಫೇಲ್​ ಖರೀದಿ ವ್ಯವಹಾರ ವಿಳಂಬವಾಗಿದೆ ಎಂದು ಕೇಂದ್ರ ಸರ್ಕಾರವನ್ನು ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ.

ಇನ್ನು ವಾಯುದಾಳಿ ಬಗ್ಗೆ ಮಾತನಾಡಿದ ರಾಗಾ, ಈ ವಿಚಾರವಾಗಿ ಹೆಚ್ಚೇನು ಮಾತನಾಡಲು ಇಷ್ಟಪಡುವುದಿಲ್ಲ. ಆದರೆ ಕೆಲ ಹುತಾತ್ಮರ ಕುಟುಂಬಗಳು ಆ ದಿನ ಏನಾಯಿತು ಎನ್ನುವ ಬಗ್ಗೆ ಕೇಳಿದ್ದಾರೆ ಎನ್ನುವ ವಿಚಾರ ಓದಿದ್ದೇನೆ ಎಂದರು.

ಲೋಕಸಭಾ ಚುನಾವಣೆಯ ಮೈತ್ರಿ ಸರಿಯಾಗಿ ಸಾಗುತ್ತಿದ್ದು, ದೆಹಲಿಯಲ್ಲಿ ಪಕ್ಷದ ಘಟಕ ಅವಿರೋಧವಾಗಿ ಮೈತ್ರಿ ಬೇಡ ಎಂದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ABOUT THE AUTHOR

...view details