ನವದೆಹಲಿ: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರ ವಹಿಸಿದ ಬಾಲ ಗಂಗಾಧರ ತಿಲಕರ 100 ನೇ ಪುಣ್ಯತಿಥಿಯನ್ನು ಇಂದು ಆಚರಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ.
ಬಾಲ ಗಂಗಾಧರ ತಿಲಕರ 100 ನೇ ಪುಣ್ಯ ತಿಥಿ: ಗೌರವ ಸಲ್ಲಿಸಿದ ಮೋದಿ - PM pays tribute to Bal Gangadhar Tilak on his 100th death anniversary
ಬಾಲ ಗಂಗಾಧರ ತಿಲಕರ 100 ನೇ ಪುಣ್ಯ ತಿಥಿ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ.
Modi
ಸ್ವಾತಂತ್ರ್ಯ ಹೋರಾಟದ ವೇಳೆ ತಿಲಕರು ಜನರಲ್ಲಿ ಆತ್ಮವಿಶ್ವಾಸವನ್ನು ಹುಟ್ಟುಹಾಕಿದರು. ಅವರ ಬುದ್ಧಿಶಕ್ತಿ, ಧೈರ್ಯ ಮತ್ತು 'ಸ್ವರಾಜ್ಯ' ಕಲ್ಪನೆ ಇಂದಿಗೂ ಸ್ಫೂರ್ತಿ ನೀಡುತ್ತಿದೆ. ಜೊತೆಗೆ 'ಸ್ವರಾಜ್ ನಮ್ಮ ಜನ್ಮಸಿದ್ಧ ಹಕ್ಕು, ನಾನು ಅದನ್ನು ಪಡೆದೇ ತೀರುತ್ತೇನೆ' ಎಂಬ ಘೋಷಣೆಯನ್ನು ಪ್ರಧಾನಿ ನೆನಪಿಸಿಕೊಂಡಿದ್ದಾರೆ.
ಬ್ರಿಟಿಷ್ ಆಡಳಿತದ ವಿರುದ್ಧ ಜನರನ್ನು ಒಗ್ಗೂಡಿಸುವ ಪ್ರಯತ್ನ ಮತ್ತು ತಿಲಕರ ಜೀವನದ ಕೆಲವು ಘಟನೆಗಳ ಕುರಿತಾದ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ.