ನವದೆಹಲಿ: ಬಿಹಾರದಲ್ಲಿನ 243 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಎರಡು ಹಂತದ ವೋಟಿಂಗ್ ಮುಕ್ತಾಯಗೊಂಡು ನಾಡಿದ್ದು, ಮೂರನೇ ಹಾಗೂ ಅಂತಿಮ ಹಂತಕ್ಕಾಗಿ ಮತದಾನ ಪ್ರಕ್ರಿಯೆ ನಡೆಯಲಿದೆ. ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಬಿಹಾರ ಜತೆಗೆ ವಿಶೇಷ ಪತ್ರ ರವಾನೆ ಮಾಡಿದ್ದಾರೆ.
ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ರಾಷ್ಟ್ರೀಯ ಪ್ರಜಾಸತಾತ್ಮಕ ಒಕ್ಕೂಟ(ಎನ್ಡಿಎ) ಅತ್ಯುತ್ತಮ ಸಾಧನೆ ಮಾಡಿದ್ದು, ಹೊಸ ಮೈಲಿಗಲ್ಲು ಸ್ಥಾಪನೆ ಮಾಡಿದೆ ಎಂದಿದ್ದಾರೆ. ಈ ಚುನಾವಣೆಯಲ್ಲಿ ಬಿಹಾರದ ಅಭಿವೃದ್ಧಿ ವಿಷಯ ಅತ್ಯಂತ ಮಹತ್ವದ್ದಾಗಿದೆ. ಇದು ನಮ್ಮೆಲ್ಲರಿಗೂ ಹೆಮ್ಮಯ ವಿಷಯವಾಗಿದೆ ಎಂದಿರುವ ನಮೋ, ಎನ್ಡಿಎ ಸರ್ಕಾರದ ಅಡಿಯಲ್ಲಿ ಬಿಹಾರ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಎನ್ಡಿಎ ಸರ್ಕಾರ ಮಾತ್ರ ಬಿಹಾರದಲ್ಲಿ ಅಭಿವೃದ್ಧಿಯ ವೇಗ ಉಸಿಕೊಳ್ಳಬಲ್ಲದಯ ಎಂದಿರುವ ಅವರು, ಎನ್ಡಿಎ ಅಭ್ಯರ್ಥಿಗಳಿಗೆ ನಿಮ್ಮ ವೋಟ್ ನೀಡಿ ನಿತೀಶ್ ಕುಮಾರ್ ಅವರನ್ನ ಗೆಲ್ಲಿಸಿ ಎಂದಿದ್ದಾರೆ. ನನಗೆ ನಿತೀಶ್ ಕುಮಾರ್ ಅವರ ಸರ್ಕಾರ ಬೇಕು. ಇದರಿಂದ ಅಭಿವೃದ್ಧಿ ಸ್ಥಗಿತಗೊಳ್ಳುವುದಿಲ್ಲ ಎಂದಿದ್ದು, ಕಳೆದ ಐದು ವರ್ಷಗಳಲ್ಲಿ ಎನ್ಡಿಎ ಸರ್ಕಾರ ಮಾಡಿರುವ ಕಾರ್ಯಗಳನ್ನ ಮೋದಿ ಪಟ್ಟಿ ಮಾಡಿದ್ದಾರೆ.
ಬಿಜೆಪಿ- ಜೆಡಿಯು ಮೈತ್ರಿಗೆ ಡಬಲ್ ಎಂಜಿನ್ ಶಕ್ತಿ ಎಂದಿರುವ ನಮೋ, ಇದು ರಾಜ್ಯವನ್ನ ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ ಎಂಬ ವಿಶ್ವಾಸ ನನಗೆ ಇದೆ ಎಂದು ಅವರು ಹೇಳಿದ್ದಾರೆ. ಬಿಹಾರದ 243 ಕ್ಷೇತ್ರಗಳ ಮತದಾನದ ಫಲಿತಾಂಶ ನವೆಂಬರ್ 10ರಂದು ಬಹಿರಂಗಗೊಳ್ಳಲಿದೆ.ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದು, ಸದ್ಯ ನಿತೀಶ್ ಕುಮಾರ್ ನೇತೃತ್ವದ ಮೈತ್ರಿ ಸರ್ಕಾರ ಅಲ್ಲಿ ಅಧಿಕಾರ ನಡೆಸುತ್ತಿದೆ.