ಕರ್ನಾಟಕ

karnataka

ETV Bharat / bharat

ಹುತಾತ್ಮ ಯೋಧರನ್ನ ಭಾರತ ಎಂದಿಗೂ ಮರೆಯುವುದಿಲ್ಲ... ಪುಲ್ವಾಮ ದಾಳಿ ಬಗ್ಗೆ ನಮೋ ಟ್ವೀಟ್​!

ಕಳೆದ ವರ್ಷ ಫೆ.14ರಂದು ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಅವಾಂತಿಪೋರಾ ಬಳಿ ಆತ್ಮಹತ್ಯಾ ಬಾಂಬರ್​ ಸ್ಫೋಟಿಸಿದ ಬಾಂಬ್​​ನಿಂದಾಗಿ 40 ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದರು.

PM Narendra Modi
ಪ್ರಧಾನಿ ನರೇಂದ್ರ ಮೋದಿ

By

Published : Feb 14, 2020, 10:43 AM IST

ನವದೆಹಲಿ:ಪುಲ್ವಾಮ ದಾಳಿ ಕರಾಳ ದಿನಕ್ಕೆ ಇದೀಗ ಒಂದು ವರ್ಷ. ಕಳೆದ ವರ್ಷ ಫೆಬ್ರವರಿ 14ರ ಗುರುವಾರ ಭದ್ರತಾ ಸಿಬ್ಬಂದಿ ಹೊತ್ತೊಯುತ್ತಿದ್ದ ವಾಹನಕ್ಕೆ ಸ್ಫೋಟಕ ತುಂಬಿಕೊಂಡು ಬಂದು ಕಾರವೊಂದು ಡಿಕ್ಕಿ ಹೊಡೆದ ಪರಿಣಾಮ 40 ಸಿಆರ್​​ಪಿಎಫ್​ ಯೋಧರು ಹುತಾತ್ಮರಾಗಿದ್ದರು.

ಜೈಷ್​​ - ಎ-ಮೊಹಮ್ಮದ್​ ಉಗ್ರ ಸಂಘಟನೆ ಆತ್ಮಹತ್ಯಾ ದಾಳಿಕೋರ ಈ ಕೃತ್ಯವೆಸಗಿದ್ದ. ಇದಾದ ಬಳಿಕ ಭಾರತ ಬಾಲಾಕೋಟ್​​​ನಲ್ಲಿ ವೈಮಾನಿಕ ದಾಳಿ ನಡೆಸಿ ಪ್ರತಿಕಾರ ತೀರಿಸಿಕೊಂಡಿತ್ತು. ಪುಲ್ವಾಮ ದಾಳಿ ನಡೆದು ಇಂದಿಗೆ ಒಂದು ವರ್ಷವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ​ ಮಾಡುವ ಮೂಲಕ ಗೌರವ ಸಲ್ಲಿಕೆ ಮಾಡಿದ್ದಾರೆ.

ಕಳೆದ ವರ್ಷ ಭೀಕರವಾದ ಪುಲ್ವಾಮ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಧೈರ್ಯಶಾಲಿ ಹುತಾತ್ಮರಿಗೆ ನನ್ನ ಗೌರವ, ನಮ್ಮ ರಾಷ್ಟ್ರದ ಸೇವೆ ಮತ್ತು ರಕ್ಷಣೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಸಾಧಾರಣ ವ್ಯಕ್ತಿಗಳು. ಅವರ ಹುತಾತ್ಮತೆಯನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ಟ್ಟಿಟ್ಟರ್​​ನಲ್ಲಿ ಬರೆದುಕೊಂಡಿದ್ದಾರೆ.

ನರೇಂದ್ರ ಮೋದಿ ಗೌರವ

ಇನ್ನು ಜಮ್ಮು- ಕಾಶ್ಮೀರದ ಯೋಧರ ಶಿಬಿರದಲ್ಲೂ ಹುತಾತ್ಮ ಸಿಆರ್​ಪಿಎಫ್​ ಯೋಧರಿಗೆ ಗೌರವ ಸಲ್ಲಿಕೆ ಮಾಡಲಾಯಿತು.

ABOUT THE AUTHOR

...view details