ಕರ್ನಾಟಕ

karnataka

ETV Bharat / bharat

ಪ್ರಧಾನಿ ಮೋದಿ ಮಹತ್ವಾಕಾಂಕ್ಷೆಯ ಅಭಿಯಾನಕ್ಕೆ ಇಂದು ಚಾಲನೆ..! - ಫಿಟ್ ಇಂಡಿಯಾ ಅಭಿಯಾನ

ಮನ್​ ಕಿ ಬಾತ್​​ನಲ್ಲಿ ಮೋದಿ 'ಫಿಟ್ ಇಂಡಿಯಾ ಅಭಿಯಾನ'ದ ಬಗ್ಗೆ ಪ್ರಸ್ತಾಪಿಸಿದ್ದರು. ರಾಷ್ಟ್ರೀಯ ಕ್ರೀಡಾ ದಿನವಾದ ಇಂದು ಫಿಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಫಿಟ್ ಇಂಡಿಯಾ ಅಭಿಯಾನ

By

Published : Aug 29, 2019, 8:47 AM IST

ನವದೆಹಲಿ: ಸ್ವಸ್ಥ ಮತ್ತು ಸದೃಢ ಭಾರತ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿರುವ ಪ್ರಧಾನಿ ಮೋದಿ ಇಂದು 'ಫಿಟ್ ಇಂಡಿಯಾ ಅಭಿಯಾನ'ಕ್ಕೆ ಚಾಲನೆ ನೀಡಲಿದ್ದಾರೆ.

ಮನ್​ ಕಿ ಬಾತ್​​ನಲ್ಲಿ ಮೋದಿ 'ಫಿಟ್ ಇಂಡಿಯಾ ಅಭಿಯಾನ'ದ ಬಗ್ಗೆ ಪ್ರಸ್ತಾಪಿಸಿದ್ದರು. ರಾಷ್ಟ್ರೀಯ ಕ್ರೀಡಾ ದಿನವಾದ ಇಂದು ಫಿಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜೆನಯಾಗಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಈ ಅಭಿಯಾನ ಯಾವ ರೀತಿ ಇರಲಿದೆ ಎನ್ನುವುದನ್ನು ವಿವರಿಸಲಿದ್ದಾರೆ.

ಫಿಟ್​ ಇಂಡಿಯಾ ಅಭಿಯಾನದಲ್ಲಿ ಮಕ್ಕಳು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲ ವಯೋಮಾನದವರು ಪಾಲ್ಗೊಳ್ಳಬಹುದು ಎಂದು ಮೋದಿ ಮನ್​ ಕಿ ಬಾತ್​ನಲ್ಲಿ ಹೇಳಿದ್ದರು.

ರಾಜನಾಥ್​ ಸಿಂಗ್​, ಮೇರಿ ಕೋಮ್​ ಟ್ವೀಟ್:

'ಫಿಟ್ ಇಂಡಿಯಾ ಅಭಿಯಾನ'ದ ಬಗ್ಗೆ ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸ್ವಸ್ಥ ಮತ್ತು ಸದೃಢ ದೇಶಕ್ಕಾಗಿ ದೇಶದ ಪ್ರತಿಯೊಬ್ಬ ಪ್ರಜೆಯೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ಮಹಿಳಾ ಬಾಕ್ಸರ್​ ಮೇರಿ ಕೋಮ್​ ವಿಡಿಯೋ ಒಂದನ್ನ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದು, ಫಿಟ್ ಇಂಡಿಯಾ ಅಭಿಯಾನಕ್ಕೆ ಸಿದ್ಧ ಎಂದು ಬರೆದುಕೊಂಡಿದ್ದಾರೆ.

ABOUT THE AUTHOR

...view details