ಕರ್ನಾಟಕ

karnataka

ETV Bharat / bharat

'ಸಂಜೆ 6 ಗಂಟೆಗೆ ಸಂದೇಶ': ಪ್ರಧಾನಿಯ ಟ್ವೀಟ್ ಹುಟ್ಟುಹಾಕಿದ ಕುತೂಹಲ - ಪ್ರಧಾನಿ ಟ್ವೀಟ್

ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 6ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದು, ತೀವ್ರ ಕುತೂಹಲ ಕೆರಳಿಸಿದೆ.

pm modi
ಪ್ರಧಾನಿ ಮೋದಿ

By

Published : Oct 20, 2020, 1:53 PM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 6 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೊರೊನಾ ವೈರಸ್​​ ಸಂಕಷ್ಟದ ನಡುವೆಯೇ ಹಲವು ಬಾರಿ ಪ್ರಧಾನಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಮಧ್ಯಾಹ್ನ 1 ಗಂಟೆಗೆ ಟ್ವೀಟ್​ ಮಾಡಿರುವ ನರೇಂದ್ರ ಮೋದಿ ಸಂಜೆ 6 ಗಂಟೆಗೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತೇನೆ ಎಂದಿದ್ದಾರೆ. ಆದರೆ ಯಾವ ವಿಷಯದ ಬಗ್ಗೆ ಮಾತನಾಡುತ್ತಾರೆ ಎಂಬುದನ್ನು ಅವರು ಹೇಳಿಲ್ಲ. ಹೀಗಾಗಿ ಮೋದಿ ಭಾಷಣ ತೀವ್ರ ಕುತೂಹಲ ಕೆರಳಿಸಿದೆ.

ಕೊರೊನಾ ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಇಳಿಕೆ ಹಾಗೂ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ದೇಶದ ಜನರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದ್ದು, ಯಾವ ವಿಚಾರದ ಬಗ್ಗೆ ಮಾತನಾಡಲಿದ್ದಾರ ಎಂಬುದು ಇನ್ನೂ ಬಹಿರಂಗವಾಗಿಲ್ಲ.

ಕೊರೊನಾ ಆರಂಭವಾದಾಗಿನಿಂದ ಪ್ರಧಾನಿ ಮೋದಿ ಜನತಾ ಕರ್ಫ್ಯೂ, 21 ದಿನಗಳ ಲಾಕ್​ಡೌನ್ ಹಾಗೂ ಕೊರೊನಾ ವಾರಿಯರ್ಸ್​ಗೆ ಗೌರವ ಸಲ್ಲಿಸುವ ಸಲುವಾಗಿ ದೀಪ ಬೆಳಗಿಸುವಿಕೆ ಮುಂತಾದ ವಿಚಾರಗಳ ಬಗ್ಗೆ ಮಾತನಾಡಿದ್ದರು.

ಇದು ಮಾತ್ರವಲ್ಲದೇ ಹಲವು ಬಾರಿ ಕೊರೊನಾ ಪ್ಯಾಕೇಜ್ ವಿಚಾರವಾಗಿಯೂ ಮಾತನಾಡಿ ಕೆಲವೊಂದು ಯೋಜನೆಗಳನ್ನು ಘೋಷಿಸಿದ್ದರು. ಇದರ ಜೊತೆಗೆ ಹಲವಾರು ಬಾರಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಕೊರೊನಾ ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿದಂತೆ ವಿಡಿಯೋ ಕಾನ್ಫರೆನ್ಸ್​ಗಳನ್ನು ನಡೆಸಿದ್ದರು.

ಈಗ ಸದ್ಯಕ್ಕೆ ಯಾವ ವಿಷಯದ ಬಗ್ಗೆ ಮಾತನಾಡಲಿದ್ದಾರೆ ಎಂಬುದು ಇನ್ನೂ ಬಹಿರಂಗವಾಗದಿರುವುದು ತೀವ್ರ ಕುತೂಹಲ ಮೂಡಿಸಿದೆ.

ABOUT THE AUTHOR

...view details