ನವದೆಹಲಿ:ಗಣರಾಜ್ಯೋತ್ಸವದ ಪಥಸಂಚಲನದಲ್ಲಿ (ಪರೇಡ್) ಭಾಗವಹಿಸಲಿರುವ ಕಲಾವಿದರು, ನೃತ್ಯ ತಂಡಗಳು, ಬುಡಕಟ್ಟು ಸಮುದಾಯದ ಕಲಾವಿದರು, ಸಾಂಸ್ಕೃತಿಕ ಕಲಾವಿದರು, ಎನ್‌ಸಿಸಿ ಕೆಡೆಟ್‌ಗಳು ಮತ್ತು ಎನ್‌ಎಸ್‌ಎಸ್ ಸ್ವಯಂಸೇವಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂವಹನ ನಡೆಸಿದರು.
ಕಲಾವಿದರು, ಎನ್‌ಎಸ್‌ಎಸ್, ಎನ್‌ಸಿಸಿ ಕೆಡೆಟ್‌ಗಳ ಜೊತೆ ಮೋದಿ ಸಂವಹನ - RepublicDayParade2020
ಗಣರಾಜ್ಯೋತ್ಸವ ಪಥಸಂಚಲನದಲ್ಲಿ (ಪರೇಡ್) ಭಾಗವಹಿಸಲಿರುವ ಕಲಾವಿದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂವಹನ ನಡೆಸಿದರು.
PM Narendra Modi takes part in an At Home event
ಎನ್‌ಸಿಸಿ (ನ್ಯಾಷನಲ್ ಕೆಡೆಟ್ ಕಾರ್ಪ್ಸ್) ಮತ್ತು ಎನ್‌ಎಸ್‌ಎಸ್ (ರಾಷ್ಟ್ರೀಯ ಸೇವಾ ಯೋಜನೆ) ಮೂಲಕ ಶಿಸ್ತು ಮತ್ತು ಸೇವೆಯ ಶ್ರೀಮಂತ ಸಂಪ್ರದಾಯ ರಾಜಪಥದಲ್ಲಿ ಸಾಕ್ಷಿಯಾದರೆ ಅದು ದೇಶದ ಕೋಟ್ಯಂತರ ಯುವಕರಿಗೆ ಸ್ಫೂರ್ತಿದಾಯಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ದೇಶದಲ್ಲಿ ಯಾರೂ ಹಿಂದುಳಿಯಬಾರದು. ಹಾಗೆಯೇ ಯಾವೊಂದು ಪ್ರದೇಶವೂ ಹಿಂದುಳಿಯದಂತೆ ನೋಡಿಕೊಳ್ಳಬೇಕು. ಗಣರಾಜ್ಯೋತ್ಸವದ ಉದ್ದೇಶವೂ ಆಗಿದೆ ಎಂದು ಹೇಳಿದರು. ಎಲ್ಲ ಕಲಾವಿದರ ಪ್ರದರ್ಶನ ವೀಕ್ಷಿಸಿದ ಪ್ರಧಾನಿ ಸಂತಸ ವ್ಯಕ್ತಪಡಿಸಿದರು.