ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾರವರ ಮರ ನೆಡುವ ಅಭಿಯಾನದ ಅಂಗವಾಗಿ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಲವು ಗಿಡ ನೆಡುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಸ್ಪೀಕರ್ ಓಂ ಬಿರ್ಲಾರ ಗ್ರೀನ್ ಇಂಡಿಯಾ ಅಭಿಯಾನಕ್ಕೆ ಪ್ರಧಾನಿ ನರೆಂದ್ರ ಮೋದಿ ಚಾಲನೆ.. - undefined
ಸಂಸತ್ತಿನಲ್ಲಿ ಇಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾರವರ ಮರ ನೆಡುವ ಅಭಿಯಾನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕೆಲ ಗಿಡ ನೆಡುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ದೇಶದ ಎಲ್ಲಾ ಗ್ರಾಮ, ನಗರಗಳನ್ನೂ ನಾವು ಹಸಿರಾಗಿಸುತ್ತೇವೆಂದು ನಂಬಿದ್ದೇವೆಂದು ಬಿರ್ಲಾ ಹೇಳಿದರು.
ಓಂ ಬಿರ್ಲಾ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಧಾನಿ ಗ್ರೀನ್ ಇಂಡಿಯಾ ಸಂದೇಶವನ್ನು ಹರಡಿದ್ದಾರೆ. ದೇಶದ ಎಲ್ಲಾ ಗ್ರಾಮ, ನಗರಗಳನ್ನು ನಾವು ಹಸಿರಾಗಿಸುತ್ತೇವೆಂದು ನಂಬಿದ್ದೇವೆ. ಪರಿಸರ ಆರೋಗ್ಯಪೂರ್ಣವಾಗಿರಬೇಕೆಂದರೆ, ದೇಶ ಹಸಿರಾಗಿರಬೇಕು. ನಾವು ಸ್ವಚ್ಛ ಅಭಿಯಾನವನ್ನು ಹೊಂದಿದ್ದೆವು. ಇನ್ನೂ ಪರಿಸರ ಸಂರಕ್ಷಣೆಗೆ ಗ್ರೀನ್ ಇಂಡಿಯಾ ಅಭಿಯಾನವನ್ನು ಆರಂಭಿಸುತ್ತಿದ್ದೇವೆಂದು ಹೇಳಿದರು.
ಅಲ್ಲದೇ, ಆರೋಗ್ಯಕರ ಹಾಗೂ ಶ್ರೀಮಂತ ಹಸಿರು ವಾತಾವರಣದ ದೇಶಕ್ಕೆ ಭಾರತ ಉದಾಹರಣೆಯಾಗುವಂತೆ ಮಾಡಬೇಕೆಂದು ತಮ್ಮ ಧ್ಯೇಯವನ್ನು ವ್ಯಕ್ತಪಡಿಸಿದರು. ಹಚ್ಚಹಸಿರ ಪರಿಸರದ ಕುರಿತು ಯೋಚಿಸುವಾಗ ಜನರ ಮನಸ್ಸಿನಲ್ಲಿ ಭಾರತದ ಹೆಸರು ಮೊದಲು ಬರುವಂತಾಗಬೇಕೆಂದರು.ಈ ವೇಳೆಯಲ್ಲಿ, ಗೃಹ ಸಚಿವ ಅಮಿತ್ಶಾ, ರಕ್ಷಣಾ ಸಚಿವ ರಾಜ್ನಾಥ್ಸಿಂಗ್, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವ್ಡೇಕರ್ ಉಪಸ್ಥಿತರಿದ್ದರು.