ಕರ್ನಾಟಕ

karnataka

ETV Bharat / bharat

ಅತ್ತ ಪಾಕ್​ ಹೆಣಗಳ ಲೆಕ್ಕ ಹಾಕ್ತಿದೆ, ಇತ್ತ ವಿಪಕ್ಷಗಳು ಏರ್​ಸ್ಟ್ರೈಕ್​ನ ಸಾಕ್ಷಿ ಕೇಳ್ತಿವೆ: ಮೋದಿ ವ್ಯಂಗ್ಯ

ಒಡಿಶಾದ ಶ್ರೀ ಕೊರಪತ್​ನಲ್ಲಿ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್​ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು

ಒಡಿಶಾದ ಶ್ರೀ ಕೊರಪತ್​ನಲ್ಲಿ ಚುನಾವಣಾ ಪ್ರಚಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ

By

Published : Mar 29, 2019, 12:55 PM IST

ಶ್ರೀ ಕೊರಪತ್​ (ಒಡಿಶಾ): ಪುಲ್ವಾಮಗೆ ಪ್ರತೀಕಾರವಾಗಿ ಪಾಕ್ ಆಕ್ರಮಿತ ಪ್ರದೇಶದ ಬಾಲಕೋಟ್​ನಲ್ಲಿ ಭಾರತ ಏರ್​ಸ್ಟ್ರೈಕ್​ ನಡೆಸಿ ತಿಂಗಳು ಕಳೆಯಿತು. ಈಗಲೂ ಪಾಕಿಸ್ತಾನ ಉಗ್ರರ ಹೆಣಗಳ ಲೆಕ್ಕಾಚಾರ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದರು.

ಒಡಿಶಾದ ಶ್ರೀ ಕೊರಪತ್​ನಲ್ಲಿ ಮಾತನಾಡಿದ ಅವರು, ಭಾರತ ಉಗ್ರವಾದಿಗಳ ವಿರುದ್ಧ ದಿಟ್ಟ ಕ್ರಮ ಕೈಗೊಂಡು, ಅವರ ಮನೆಗಳಿಗೇ ನುಗ್ಗಿ ಹೊಡೆದು ಹಾಕಿದೆವು. ಆದರೆ ಇಲ್ಲಿ ಕೆಲವರು ದಾಳಿ ಬಗ್ಗೆ ಸಾಕ್ಷಿ ನೀಡಿ ಎನ್ನುತ್ತಿದ್ದಾರೆ ಎಂದು ವಿಪಕ್ಷಗಳ ವಿರುದ್ಧ ಹರಿಹಾಯ್ದರು.

ಒಡಿಶಾದ ಶ್ರೀ ಕೊರಪತ್​ನಲ್ಲಿ ಚುನಾವಣಾ ಪ್ರಚಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ

ನಮ್ಮ ವಿಜ್ಞಾನಿಗಳ ಹಾಗೂ ಯೋಧರಿಗೆ ಅವಮಾನ ಮಾಡಿದ ಜನರಿಗೆ ತಕ್ಕ ಉತ್ತರ ಕೊಡುವ ಸಂದರ್ಭವಿದು. ಮತಗಟ್ಟೆಗೆ ತೆರಳುವಾಗ ಮುಕ್ತ ಮನಸ್ಸಿನಿಂದ ಆಲೋಚಿಸಿ, ಅಡಗಿ ಕುಳಿತ ಉಗ್ರರನ್ನು ಹೊರಗೆಳೆದು ಕೊಲ್ಲುವ ಸರ್ಕಾರ ಬೇಕಾ? ಅಥವಾ ಉಗ್ರರಿಗೆ ಹೆದರಿ ಕೂರುವ ಸರ್ಕಾರ ಬೇಕಾ? ಎಂದು. ನಕ್ಸಲೈಟ್​ಗಳನ್ನು ತಡೆಯಲಾಗದ ಸರ್ಕಾರಕ್ಕೆ ಶಿಕ್ಷೆ ನೀಡುವ ಬಗ್ಗೆ ಯೋಚಿಸಿ ಎಂದು ಹೇಳಿದರು.

2019ರ ಚುನಾವಣೆ ಕೇವಲ ಶಾಸಕರನ್ನು, ಸಂಸದರನ್ನು ಆಯ್ಕೆ ಮಾಡುವುದಷ್ಟೇ ಅಲ್ಲ. ಮತ್ತೊಮ್ಮೆ ಅಭಿವೃದ್ಧಿಯ ಡಬಲ್​ ಎಂಜಿನ್ ಆದ ಬಿಜೆಪಿಯನ್ನು ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಸುಸಂದರ್ಭ. ಮುಂದಿನ 5 ವರ್ಷಗಳಲ್ಲಿ ಹೊಸ ಒಡಿಶಾ ಹಾಗೂ ನವ ಭಾರತ ನಿರ್ಮಾಣ ಮಾಡಲು ಚುನಾವಣೆಗೆ ನಿಮಗೆ ಆಯ್ಕೆ ನೀಡಿದೆ. ಚಿಟ್​ಫಂಡ್​ ಹಗರಣದಲ್ಲಿ ಭಾಗಿಯಾದವರು, ಮೈನಿಂಗ್​ ಹಗರಣ ಮಾಡುತ್ತಿರುವವರು ಒಡಿಶಾ ಅಭಿವೃದ್ಧಿ ಮಾಡಬಲ್ಲರೇ? ಎಂದು ರಾಜ್ಯ ಸರ್ಕಾರವನ್ನು ಕುಟುಕಿದರು.


ABOUT THE AUTHOR

...view details