ವಾರಣಾಸಿ:2019ನೇ ಲೋಕಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಿಂದ ಕಣಕ್ಕಿಳಿದಿದ್ದು, ಇಂದು ನಾಮಪತ್ರ ಸಲ್ಲಿಸಿದರು.
ವಾರಣಾಸಿಯ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಮೋದಿ ಉಮೇದುವಾರಿಕೆ ಸಲ್ಲಿಸಿದರು. ಇದಕ್ಕೂ ಮೊದಲು ಕಾಶಿಯ ಕೋತ್ವಾಲ ಎಂದೇ ಕರೆಯವ ಕಾಲಭೈರವ ಮಂದಿರಕ್ಕೆ ಭೇಟಿನೀಡಿ ಪ್ರಾರ್ಥನೆ ಸಲ್ಲಿಸಿದ್ರು.
2ನೇ ಭಾರಿ ಆಯ್ಕೆಯನ್ನ ಬಯಸಿರುವ ನರೇಂದ್ರ ಮೋದಿ ವಾರಣಾಸಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಇನ್ನು ಪ್ರಧಾನಿ ಮೋದಿಗೆ ಸೂಚಕರಾಗಿ ಡಾ ಅನ್ನಪೂರ್ಣ ಮತ್ತು ದಲಿತ ಸಮುದಾಯಕ್ಕೆ ಸೇರಿದ ಚೌಕಿದಾರ್ ದೋಮರಾಜ್ ಸಹಿ ಮಾಡಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಎನ್ಡಿಎ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದರು. ಮಿತ್ರಪಕ್ಷಗಳಾದ ಅಕಾಲಿದಳ, ಎಲ್ಜೆಪಿ, ಜೆಡಿಯು, ಎಐಎಡಿಎಂಕೆ, ಶಿವಸೇನೆ ಹಾಗೂ ಇನ್ನಿತರ ಪಕ್ಷಗಳ ಮುಖಂಡರು ಹಾಜರಿದ್ದರು.