ಕರ್ನಾಟಕ

karnataka

ETV Bharat / bharat

ವಾರಣಾಸಿಯ ‘ದೇವ್ ದೀಪಾವಳಿ’ ಸಂಭ್ರಮದಲ್ಲಿ ಪ್ರಧಾನಿ ಮೋದಿ ಭಾಗಿ..?

ವಾರಣಾಸಿಯ ಗಂಗಾನದಿ ತಟದಲ್ಲಿ ದೇವ್​​ ದೀಪಾವಳಿ ಆಚರಣೆಗೆ ಸಿಎಂ ಯೋಗಿ ಆದಿತ್ಯಾನಾಥ ಜೊತೆ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ ಎನ್ನಲಾಗ್ತಿದೆ. 6 ಪಥ ಹೆದ್ದಾರಿ ಉದ್ಘಾಟನೆಗೆ ಆಗಮಿಸಲಿರುವ ಮೋದಿ ದೀಪಾವಳಿ ಸಂಭ್ರಮದಲ್ಲೂ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ.

PM MODI
ಪ್ರಧಾನಿ ಮೋದಿ

By

Published : Nov 23, 2020, 10:50 AM IST

ವಾರಣಾಸಿ (ಉ.ಪ್ರ): ನವೆಂಬರ್ 30 ರಂದು ನಡೆಯಲಿರುವ ‘ದೇವ್ ದೀಪಾವಳಿ’ ಉತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ತಮ್ಮ ಸ್ವಕ್ಷೇತ್ರ ವಾರಣಾಸಿಗೆ ತಲುಪಲಿರುವ ಮೋದಿ ಅಲ್ಲಿಂದ ಯೋಗಿ ಆದಿತ್ಯನಾಥ್ ಭೇಟಿಯಾಗಿ ‘ದೇವ್ ದೀಪಾವಳಿ’ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗ್ತಿದೆ.

ವಾರಣಾಸಿ - ಪ್ರಯಾಗ್​​ರಾಜ್ ಸಂಪರ್ಕಿಸುವ ನೂತನ 6 ಪಥದ ಹೆದ್ದಾರಿ ಉದ್ಘಾಟಿಸಲಿರುವ ಮೋದಿ, ಬಳಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಕಾಶಿಯ 84 ಘಾಟ್​ಗಳಲ್ಲಿ 15 ಲಕ್ಷ ದೀಪಗಳು ಬೆಳಗಲಿವೆ. ಈ ವೇಳೆ, ಗಂಗಾ ನದಿ ತಟದಲ್ಲಿ ಆಕರ್ಷಕ ಲೇಸರ್ ಶೋ ಕೂಡ ಏರ್ಪಡಿಸಲಾಗಿದೆ.

ಇನ್ನು ಈ ಕಾರ್ಯಕ್ರಮದಲ್ಲಿ ಮೋದಿ, ಯೋಗಿ ಆದಿತ್ಯನಾಥ ಜೊತೆ ಉತ್ತರಪ್ರದೇಶ ರಾಜ್ಯಪಾಲರು ಸಹ ಭಾಗಿಯಾಗುವ ಸಾಧ್ಯತೆ ಇದೆ. ಮೋದಿ ತಮ್ಮ ಸ್ವಕ್ಷೇತ್ರದಲ್ಲಿ ದೀಪಾವಳಿ ಸಂಭ್ರಮಾಚರಣೆಗೆ ಇದೇ ಮೊದಲ ಬಾರಿಗೆ ಆಗಮಿಸಿದಂತಾಗುತ್ತದೆ. ಆದರೆ, ಅವರ ಭೇಟಿಯ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ABOUT THE AUTHOR

...view details