ಕೊಲಂಬೊ: ಶ್ರೀಲಂಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಕೊಲಂಬೊದಲ್ಲಿರುವ ಇಂಡಿಯಾ ಹೌಸ್ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಇಂದು ಜಗತ್ತಿನಲ್ಲಿ ಭಾರತೀಯರ ಸ್ಥಾನ ಪ್ರಬಲವಾಗಿದೆ. ಆ ಕ್ರೆಡಿಟ್ನ ಹೆಚ್ಚಿನ ಭಾಗ ಭಾರತೀಯ ವಲಸಿಗರಿಗೆ ಸಲ್ಲಬೇಕು. ನಾನು ಎಲ್ಲಿಗೆ ಹೋದರೂ, ಭಾರತೀಯ ವಲಸಿಗರ ಯಶಸ್ಸು ಮತ್ತು ಸಾಧನೆಗಳನ್ನು ಕುರಿತು ಮಾತನಾಡುತ್ತೇನೆ ಎಂದರು.
ಕಳೆದ ಐದು ವರ್ಷಗಳಲ್ಲಿ ನಾವು ಹೆಚ್ಚು ಸಾಧಿಸಿದ್ದೇವೆ. ಮುಂಬರುವ ವರ್ಷಗಳಲ್ಲಿ ಸಾಧಿಸೋದು ಬಹಳವಿದೆ. ಜನರ ಅಭಿವೃದ್ಧಿಗೆ ಶ್ರಮ ವಹಿಸುವುದಾಗಿ ಮೋದಿ ಹೇಳಿದರು.
ಇದಕ್ಕೂ ಮೊದಲು ಶ್ರೀಲಂಕಾದ ಪ್ರೆಸಿಡೆನ್ಶಿಯಲ್ ಸೆಕ್ರೆಟರಿಗೆ ಭೇಟಿ ನೀಡಿದ ಅವರು, ಆಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದರು.
ಶ್ರೀಲಂಕಾ ಮಾಜಿ ಪ್ರಧಾನಿ, ಹಾಲಿ ವಿರೋಧ ಪಕ್ಷದ ನಾಯಕ ಮಹಿಂದಾ ರಾಜಪಕ್ಸ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.