ಕರ್ನಾಟಕ

karnataka

ETV Bharat / bharat

ತಮ್ಮ ಮಾತಿನ ಪರಿಣಾಮಗಳ ಬಗ್ಗೆ ಪಿಎಂ ಯಾವಾಗಲೂ ಎಚ್ಚರಿಕೆಯಿಂದರಬೇಕು : ಡಾ.ಮನಮೋಹನ್​ಸಿಂಗ್​ ಸಲಹೆ​ - ಚೀನಾದ ಗಡಿ ಘರ್ಷಣೆ ಕುರಿತು ಮನಮೋಹನ್​ಸಿಂಗ್​​ ಪ್ರತಿಕ್ರಿಯೆ

ಚೀನಾದ ಗಡಿಯಲ್ಲಿ ನಡೆದ ಘರ್ಷಣೆ ವಿಚಾರವಾಗಿ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಪ್ರತಿಕ್ರಿಯಿಸಿದ್ದು, ಇಂತಹ ವಿವಾದಗಳಲ್ಲಿ ಪ್ರಧಾನಿ ಆದವರು ಮಾತನಾಡುವಾಗ ಅವರ ಮಾತುಗಳು ಮತ್ತು ಘೋಷಣೆಗಳ ಪರಿಣಾಮಗಳ ಬಗ್ಗೆ ಯಾವಾಗಲೂ ಎಚ್ಚರವಾಗಿರಬೇಕು ಎಂದು ಮನಮೋಹನ್​ ಸಿಂಗ್​ ಹೇಳಿದ್ದಾರೆ.

manmohan-on-ladakh-standoff
ಮನಮೋಹನ್​ಸಿಂಗ್

By

Published : Jun 22, 2020, 11:44 AM IST

ನವದೆಹಲಿ:ಇತ್ತೀಚೆಗೆ ಲಡಾಖ್​​ನಲ್ಲಿ ಭಾರತೀಯ ಸೇನೆ ಮತ್ತು ಚೀನಾ ಪಡೆಗಳ ನಡುವಿನ ಮುಖಾಮುಖಿ ಕುರಿತು ಮೊದಲ ಬಾರಿ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಈ ಗಡಿ ಸಂಘರ್ಷದ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾತುಗಳ ಪರಿಣಾಮಗಳನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ, ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿಕೊಂಡು ಹುತಾತ್ಮರಾದ ಸೈನಿಕರಿಗೆ ನ್ಯಾಯ ದೊರಕಿಸಿಕೊಡುವಂತೆ ಪ್ರಧಾನ ಮಂತ್ರಿ ಮೋದಿ ಅವರನ್ನು ಒತ್ತಾಯಿಸಿದ್ದಾರೆ. ಇದರಲ್ಲಿ ಏನೇ ಕಡಿಮೆಯಾದರೂ ಅದು ಜನರ ನಂಬಿಕೆಗೆ ಮಾಡುವ ಒಂದು ಐತಿಹಾಸಿಕ ದ್ರೋಹವಾಗಿದೆ ಎಂದು ಮನಮೋಹನ್​ ಸಿಂಗ್​​ ತಿಳಿಸಿದ್ದಾರೆ.

ಮನಮೋಹನ್​ಸಿಂಗ್​​

ದೇಶವು ಈಗ ಐತಿಹಾಸಿಕ ಸಂದಿಗ್ದತೆಯನ್ನ ಎದುರಿಸುತ್ತಿದೆ. ಹೀಗಾಗಿ ಸರ್ಕಾರದ ನಿರ್ಧಾರಗಳು ಮತ್ತು ಕ್ರಮಗಳು ಭವಿಷ್ಯದ ಪೀಳಿಗೆಗಳು ನಮ್ಮನ್ನು ಹೇಗೆ ಗ್ರಹಿಸುತ್ತವೆ ಎಂಬುದರ ಬಗ್ಗೆ ಗಂಭೀರವಾದ ಪ್ರಭಾವ ಬೀರುತ್ತವೆ ಎಂದಿದ್ದಾರೆ.

"ನಮ್ಮನ್ನು ಮುನ್ನಡೆಸುವವರು ಅತ್ಯಂತ ಜವಾಬ್ದಾರಿಯ ಕರ್ತವ್ಯದ ಭಾರವನ್ನು ಹೊರುತ್ತಾರೆ" ಮತ್ತು ನಮ್ಮ ಪ್ರಜಾಪ್ರಭುತ್ವದಲ್ಲಿ ಆ ಜವಾಬ್ದಾರಿ ಪ್ರಧಾನಮಂತ್ರಿ ಕಚೇರಿ ಮೇಲಿದೆ. ನಮ್ಮ ರಾಷ್ಟ್ರದ ಭದ್ರತೆಯ ಮೇಲೆ ಕಾರ್ಯತಂತ್ರದ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಗ್ಗೆ ಅವರ ಮಾತುಗಳು ಮತ್ತು ಘೋಷಣೆಗಳ ಪರಿಣಾಮಗಳ ಬಗ್ಗೆ ಪ್ರಧಾನ ಮಂತ್ರಿ ಯಾವಾಗಲೂ ಎಚ್ಚರವಾಗಿರಬೇಕು" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details