ಕರ್ನಾಟಕ

karnataka

ETV Bharat / bharat

ನರೇಂದ್ರ ಮೋದಿಗೆ ಪಾಕ್​ ಮಹಿಳೆಯಿಂದ ವಿಶೇಷ ರಾಖಿ - ರಾಖಿ

ರಕ್ಷಾಬಂಧನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪಾಕಿಸ್ತಾನದಿಂದ ಮಹಿಳೆಯೊಬ್ಬರು ರಾಖಿ ಕಳುಹಿಸಿಕೊಟ್ಟಿದ್ದಾರೆ. ಇದರ ಜೊತೆಗೆ ಪ್ರಧಾನಿಗಳ ಉತ್ತಮ ಆರೋಗ್ಯಕ್ಕಾಗಿ ಅಲ್ಲಾಹುವಿನಲ್ಲಿ ಪ್ರಾರ್ಥಿಸುವುದಾಗಿಯೂ ತಿಳಿಸಿದ್ದಾರೆ.

PM Modi's sister from Pakistan
PM Modi's sister from Pakistan

By

Published : Jul 31, 2020, 3:04 PM IST

ನವದೆಹಲಿ: ರಕ್ಷಾ ಬಂಧನ ದಿನಾಚರಣೆ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪಾಕಿಸ್ತಾನದ ಮಹಿಳೆ ಕಮರ್ ಮೊಶಿನ್ ಶೇಖ್ ಸ್ಪೆಷಲ್ ರಾಖಿ ಕಳುಹಿಸಿಕೊಟ್ಟಿದ್ದಾರೆ.

ಈ ಕುರಿತಾಗಿ ಖಾಸಗಿ ಸುದ್ದಿವಾಹಿನಿ ಜತೆ ಮಾತನಾಡಿರುವ ಮೊಶಿನ್​, ಕೊರೊನಾ ಸಂಕಷ್ಟದ ವೇಳೆ ನನ್ನ ಸಹೋದರನ ಸುರಕ್ಷತೆ ಮುಖ್ಯವಾಗಿದೆ. ಹೀಗಾಗಿ ಪೋಸ್ಟ್​ ಮೂಲಕ ರಾಖಿ ಕಳುಹಿಸಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಅವರು ನನ್ನನ್ನು ಭಾರತಕ್ಕೆ ಆಹ್ವಾನಿಸಲು ಸಾಧ್ಯವಿಲ್ಲ. ಹೀಗಾಗಿ ಪಾಕಿಸ್ತಾನದಿಂದಲೇ ಕೊರಿಯರ್​ ಮೂಲಕ ಅವರಿಗೆ ರಾಖಿ ಕಳುಹಿಸಿಕೊಟ್ಟಿದ್ದು, ಜೊತೆಗೆ ಪತ್ರವನ್ನೂ ಬರೆದಿರುವುದಾಗಿ ತಿಳಿಸಿದ್ದಾರೆ.

ಪಾಕ್​ ಮಹಿಳೆಯಿಂದ ಪ್ರಧಾನಿ ಮೋದಿಗೆ ವಿಶೇಷ ರಾಖಿ

ಪ್ರಧಾನಿ ನರೇಂದ್ರ ಮೋದಿಯವರಿಗೆ ದೀರ್ಘಾವಧಿ ಆರೋಗ್ಯ ದೊರೆಯಲಿ. ದೇಶದಲ್ಲಿ ಇದೇ ರೀತಿ ಅವರು ಇನ್ನಷ್ಟು ಉತ್ತಮ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಲಿ ಎಂದು ಅಲ್ಲಾನ ಬಳಿ ಪ್ರಾರ್ಥಿಸುವುದಾಗಿ ಅವರು ಕಳುಹಿಸಿರುವ ಪತ್ರದಲ್ಲಿ ಬರೆದಿದ್ದಾರೆ.

ರಕ್ಷಾ ಬಂಧನದ ದಿನ ಅವರು ನನ್ನೊಂದಿಗೆ ವಿಡಿಯೊ ಕಾನ್ಫರೆನ್ಸ್​ ಮೂಲಕ ಮಾತನಾಡಲಿದ್ದಾರೆ ಎಂಬ ವಿಶ್ವಾಸ ನನ್ನದು. ಕಳೆದ 25 ವರ್ಷಗಳಿಂದ ಮೋದಿಗೆ ರಾಖಿ ರವಾನಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ABOUT THE AUTHOR

...view details