ಕರ್ನಾಟಕ

karnataka

ETV Bharat / bharat

ಪ್ರಧಾನಿ ಮೋದಿ ಟ್ವಿಟರ್​​​ ಅಕೌಂಟ್​ ಹ್ಯಾಕ್​​​: ಬಿಟ್ ​ಕಾಯಿನ್​​ಗೆ ಬೇಡಿಕೆ ಇಟ್ಟ ಹ್ಯಾಕರ್ಸ್​​​​​!

ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್​​ಸೈಟ್​​ಗೆ ಲಿಂಕ್​ ಆಗಿರುವ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಕೋವಿಡ್​-19 ಪರಿಹಾರ ನಿಧಿಗೆ ಬಿಟ್​ಕಾಯಿನ್ ರೂಪದಲ್ಲಿ​ ದೇಣಿಗೆ ನೀಡಿ ಎಂದು ಹ್ಯಾಕರ್​ ಮನವಿ ಮಾಡಿದ್ದಾನೆ. ಆದರೆ ತಕ್ಷಣವೇ ಈ ಫೇಕ್​​​ ಟ್ವೀಟ್​​ಗಳನ್ನು ಡಿಲೀಟ್​ ಮಾಡಲಾಗಿದೆ.

narendra modi
ನರೇಂದ್ರ ಮೋದಿ

By

Published : Sep 3, 2020, 7:39 AM IST

Updated : Sep 3, 2020, 10:18 AM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವೆಬ್​ಸೈಟ್​​ಗೆ ಲಿಂಕ್​ ಆಗಿರುವ ಟ್ವಿಟರ್​ ಅಕೌಂಟ್​ ಹ್ಯಾಕ್​ ಆಗಿದೆ. ಕೋವಿಡ್​​-19 ಪರಿಹಾರ ನಿಧಿಗೆ ಬಿಟ್​ ಕಾಯಿನ್​ ರೂಪದಲ್ಲಿ ದೇಣಿಗೆ ನೀಡಿ ಎಂದು ಹ್ಯಾಕರ್​ ಮನವಿ ಮಾಡಿದ್ದಾನೆ.

ಪ್ರಧಾನಿ ಮೋದಿಯವರ ಟ್ವಿಟರ್​ ಖಾತೆ ಹ್ಯಾಕ್​

ಪ್ರಧಾನಿಯವರ ವೈಯಕ್ತಿಕ ವೆಬ್​ಸೈಟ್​​ಗೆ ಲಿಂಕ್​ ಆಗಿರುವ ಟ್ವಿಟರ್​ ಅಕೌಂಟ್​​ನಲ್ಲಿ ಕ್ರಿಪ್ಟೊ ಕರೆನ್ಸಿಗೆ ಸಂಬಂಧಿಸಿದ ಟ್ವೀಟ್​​ಗಳನ್ನು ಹ್ಯಾಕರ್​​ಗಳು ಪೋಸ್ಟ್​ ಮಾಡಿದ್ದಾರೆ. ಕೋವಿಡ್​-19ಗೆ ಸಂಬಂಧಿಸಿದಂತೆ ರಚಿಸಲಾದ ಪ್ರಧಾನಮಂತ್ರಿಯವರ ಪರಿಹಾರ ನಿಧಿಗೆ ದೇಣಿಗೆ ನೀಡಿ ಎಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಹ್ಯಾಕರ್​ ಟ್ವಿಟರ್​ ಅಕೌಂಟ್​​ನಲ್ಲಿ ಮೆಸೇಜ್​ ಹಾಕಿದ್ದಾನೆ.

ಈ ಖಾತೆಯನ್ನು ಜಾನ್​ ವಿಕ್​​ ಎಂಬಾತ ಹ್ಯಾಕ್​ ಮಾಡಿದ್ದಾನೆ. ನಾವು ಪೇಟಿಮ್​​ ಮಾಲ್​ ಹ್ಯಾಕ್​ ಮಾಡಿಲ್ಲ ಎಂದು ಹ್ಯಾಕರ್​ ಇನ್ನೊಂದು ಟ್ವೀಟ್​​ನಲ್ಲಿ ಬರೆದಿದ್ದಾನೆ. ಈಗ ಈ ಎಲ್ಲಾ ಟ್ವೀಟ್​​ಗಳನ್ನೂ ಡಿಲೀಟ್​ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಪರ್ಸನಲ್​​ ವೆಬ್​ಸೈಟ್​​ಗೆ ಲಿಂಕ್​ ಆಗಿರುವ​​ ಟ್ವಿಟರ್​ ಅಕೌಂಟ್ ​​@narendramodiಗೆ 61 ಮಿಲಿಯನ್​​ ಮಂದಿ ಫಾಲೋವರ್ಸ್​ ಇದ್ದಾರೆ.

Last Updated : Sep 3, 2020, 10:18 AM IST

ABOUT THE AUTHOR

...view details