ನವದೆಹಲಿ:ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳನ್ನು ಒಳಗೊಂಡಿರುವ ಎರಡು ಬೋಯಿಂಗ್ 777 ವಿಮಾನಗಳು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯಾಣಕ್ಕಾಗಿ 2020ರ ಜೂನ್ ವೇಳೆಗೆ ಸೇರ್ಪಡೆ ಆಗಲಿವೆ.
ಮುಂದಿನ ವರ್ಷ ಜುಲೈನಿಂದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ಗಣ್ಯರ ಪ್ರಯಾಣಕ್ಕೆ ಬಳಸಲಾಗುವ ವಿಮಾನಗಳನ್ನು ಭಾರತೀಯ ವಾಯುಪಡೆಯ ಪೈಲಟ್‌ಗಳು ನಿರ್ವಹಿಸಲಿದ್ದಾರೆಯೇ ಹೊರತು ಏರ್ ಇಂಡಿಯಾ ಅಲ್ಲವೆಂದು ಹಿರಿಯ ಅಧಿಕಾರಿವೋರ್ವರು ಮಾಹಿತಿ ನೀಡಿದ್ದಾರೆ.
ಕ್ಷಿಪಣಿ ನಿರೋಧಕ ವ್ಯವಸ್ಥೆಯ ಜೊತೆಗೆ ಕ್ಷಿಪಣಿಗಳ ಮಾರ್ಗ ತಪ್ಪಿಸುವ ಚಾಣಾಕ್ಷ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬೋಯಿಂಗ್‌ನ ಈ ಹೊಸ ವಿಮಾನಗಳಲ್ಲಿ ಅಳವಡಿಸಲಾಗುತ್ತಿದೆ. ಪ್ರಧಾನಿ ಜೊತೆಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ ತಮ್ಮ ವಿದೇಶ ಹಾಗೂ ವಿಶೇಷ ಸಂಚಾರಕ್ಕೆ ಇವುಗಳನ್ನು ಬಳಸಿಕೊಳ್ಳಬಹುದು.
ಭಾರತೀಯ ರಾಷ್ಟ್ರೀಯ ವಾಹಕದ ಅಂಗಸಂಸ್ಥೆಯಾದ ಏರ್ ಇಂಡಿಯಾ ಎಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ (ಎಐಇಎಸ್ಎಲ್) ಇದರ ಇತರೆ ಉಸ್ತುವಾರಿಯನ್ನು ನಿರ್ವಹಿಸಲಿದೆ ಎಂದು ಅಧಿಕಾರಿ ತಿಳಿಸಿದರು.
ಏನಿದರ ವಿಶೇಷತೆ?
ವಿಮಾನದಲ್ಲಿ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಅಳವಡಿಸಲಾಗಿದೆ. ಸಿಬ್ಬಂದಿಯು ಸುಮ್ಮನೆ ಕುಳಿತಿದ್ದರೂ ವಿಮಾನದ ಸ್ವಯಂ ರಕ್ಷಣಾ ವ್ಯವಸ್ಥೆಯು ಎದುರಾಳಿಯ ವಿಮಾನಗಳನ್ನು ಪತ್ತೆ ಮಾಡಲಿದೆ. ವಿಮಾನ ಹೊರಭಾಗದಲ್ಲಿರುವ ಸೆನ್ಸಾರ್ಗಳು ಯುದ್ಧ ವಿಮಾನಗಳನ್ನು ಮತ್ತೆ ಮಾಡಿ ಸ್ವಯಂಚಾಲಿತವಾಗಿ ದಾಳಿ ಮಾಡಿ ನಾಶ ಪಡಿಸುತ್ತವೆ. ಒಂದು ರೀತಿಯಲ್ಲಿ ಒನ್ ಪ್ಲೇನ್ ಆರ್ಮಿಯಾಗಿ ಇದು ಸೇವೆ ಸಲ್ಲಿಸಲಿದೆ.