ಕರ್ನಾಟಕ

karnataka

ETV Bharat / bharat

ಹಥ್ರಾಸ್​ ಅತ್ಯಾಚಾರದ ಬಗ್ಗೆ ಮೋದಿ ತುಟಿ ಬಿಚ್ಚುತ್ತಿಲ್ಲ: ಪ್ರಧಾನಿ ವಿರುದ್ಧ ರಾಹುಲ್​ ವಾಗ್ದಾಳಿ

ಕೃಷಿ ಮಸೂದೆ 2020ರ ವಿರುದ್ಧ ರಾಹುಲ್​ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿ ಅವರು ರೈತರಿಗಾಗಿ ಕತ್ತಲೆ ಕಾನೂನು ಜಾರಿಗೊಳಿಸಲು ಮುಂದಾಗಿದ್ದಾರೆ ಎಂದರು.

Rahul Gandhi
Rahul Gandhi

By

Published : Oct 6, 2020, 3:39 PM IST

ಪಟಿಯಾಲ​: ಕೃಷಿ ಮಸೂದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರಾಹುಲ್ ಗಾಂಧಿ ಇಂದು ಪಂಜಾಬ್​​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅನೇಕ ವಿಚಾರಗಳನ್ನಿಟ್ಟುಕೊಂಡು ವಾಗ್ದಾಳಿ ನಡೆಸಿದರು.

ಪ್ರಧಾನಿ ವಿರುದ್ಧ ರಾಹುಲ್​ ವಾಗ್ದಾಳಿ

ಉತ್ತರ ಪ್ರದೇಶದ ಹಥ್ರಾಸ್​​ನಲ್ಲಿ ನಡೆದ ದಲಿತ ಯುವತಿ ಅತ್ಯಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತುಟಿ ಬಿಚ್ಚುತ್ತಿಲ್ಲ. ಯುವತಿ ಮೇಲೆ ಅಮಾನವೀಯ ರೀತಿಯಲ್ಲಿ ಅತ್ಯಾಚಾರವೆಸಗಿ, ಕ್ರೂರವಾಗಿ ಹಲ್ಲೆ ನಡೆಸಲಾಗಿದೆ. ಇಡೀ ಉತ್ತರ ಪ್ರದೇಶ ಸರ್ಕಾರ ಕುಟುಂಬದ ವಿರುದ್ಧ ತಿರುಗಿ ಬಿದ್ದಿದೆ. ಆದರೆ, ಪ್ರಧಾನಿ ಮೋದಿ ಈ ಪ್ರಕರಣದ ಬಗ್ಗೆ ಇಲ್ಲಿಯವರೆಗೆ ಮಾತನಾಡಿಲ್ಲ. ಆದರೂ ಯೋಗಿ ಆದಿತ್ಯನಾಥ್​ ಮಾತನಾಡಿ, ಅಪರಾಧಿಗಳ ವಿರುದ್ಧ ಮೋದಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದಿದ್ದಾರೆ ಎಂದು ಹೇಳಿದರು.

ಕೃಷಿ ಮಸೂದೆ ವಿರುದ್ಧ ವಾಗ್ದಾಳಿ

ಪಂಜಾಬ್​ನಲ್ಲಿ 'ಖೇತಿ ಬಚಾವೋ ಯಾತ್ರೆ'ಯಲ್ಲಿ ಭಾಗಿಯಾಗಿರುವ ರಾಹುಲ್​ ಗಾಂಧಿ, ಕೇಂದ್ರ ಸರ್ಕಾರದಿಂದ ಜಾರಿಗೊಳ್ಳುತ್ತಿರುವ ಮಸೂದೆ ಕೃಷಿಕರ ವಿರುದ್ಧವಾಗಿದೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರು ಕತ್ತಲೆ ಕಾನೂನು ಜಾರಿಗೊಳಿಸುತ್ತಿದ್ದು, ಈ ಕಾನೂನು ದೇಶದಲ್ಲಿ ಅಸ್ತಿತ್ವದಲ್ಲಿರುವ ಕೃಷಿ ಮತ್ತು ಆಹಾರ ಸುರಕ್ಷತೆ ಕಾಯ್ದೆ ಹಾಳು ಮಾಡುತ್ತೇವೆ ಎಂದರು. ಪಂಜಾಬ್​ ಮತ್ತು ಹರಿಯಾಣ ರಾಜ್ಯಗಳಲ್ಲಿ ಇದರಿಂದ ಹೆಚ್ಚು ಹಾನಿ ಇದೆ ಎಂದು ತಿಳಿಸಿದರು.

ಸಂಸತ್​ನಲ್ಲಿ ಕೃಷಿ ಮಸೂದೆಗಳಿಗೆ ಅನುಮೋದನೆ ಪಡೆದುಕೊಳ್ಳುತ್ತಿದ್ದ ವೇಳೆ ತಾವು ವಿದೇಶಕ್ಕೆ ತೆರಳಿದ್ದ ಬಗ್ಗೆ ಮಾತನಾಡಿದ ರಾಹುಲ್​, ನನ್ನ ತಾಯಿ ವೈದ್ಯಕೀಯ ತಪಾಸಣೆಗೋಸ್ಕರ ಹೋಗಿದ್ದರು. ಸಹೋದರಿ ಪ್ರಿಯಾಂಕಾ ಗಾಂಧಿಯ ಕೆಲ ಸದಸ್ಯರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಅವರು ಹೋಗಲು ಸಾಧ್ಯವಾಗಲಿಲ್ಲ. ನಾನು ಅವಳ ಮಗ, ಅವರನ್ನ ನೋಡಿಕೊಳ್ಳಬೇಕಾಗಿರುವುದು ನನ್ನ ಕರ್ತವ್ಯ ಎಂದರು.

ಸುದ್ದಿಗೋಷ್ಠಿಯಲ್ಲಿ ಪಂಜಾಬ್​ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಮತ್ತು ಪಕ್ಷದ ವಕ್ತಾರರಾದ ರಂದೀಪ್​ ಸುರ್ಜೆವಾಲ್​, ಹರೀಶ್ ರಾವತ್​ ಮತ್ತು ಪಂಜಾಬ್​ ಕಾಂಗ್ರೆಸ್​ ಮುಖ್ಯಸ್ಥ ಸುನಿಲ್​ ಜಖರ್​ ಭಾಗಿಯಾಗಿದ್ದರು.

ABOUT THE AUTHOR

...view details