ಕರ್ನಾಟಕ

karnataka

ETV Bharat / bharat

ಶಾಪಿಂಗ್ ಮಾಡುವಾಗ 'ವೋಕಲ್ ಫಾರ್ ಲೋಕಲ್' ನೆನಪಿರಲಿ: ಮನ್​ ಕಿ ಬಾತ್​ನಲ್ಲಿ ಮೋದಿ ಸ್ವದೇಶಿ ಮಂತ್ರ - ವೋಕಲ್ ಫಾರ್ ಲೋಕಲ್ ಸಂಕಲ್ಪ

ಹಬ್ಬಗಳನ್ನು ಸಂಯಮದಿಂದ ಆಚರಿಸಬೇಕು ಮತ್ತು ಶಾಪಿಂಗ್ ಮಾಡುವಾಗ 'ವೋಕಲ್ ಫಾರ್ ಲೋಕಲ್' ಸಂಕಲ್ಪವನ್ನು ನೆನಪಿಸಿಕೊಳ್ಳಬೇಕೆಂದು ಪ್ರಧಾನಿ ಮೋದಿ ಜನರಲ್ಲಿ ಮನವಿ ಮಾಡಿದ್ದಾರೆ.

PM Modi
ಮನ್​ ಕಿ ಬಾತ್​ನಲ್ಲಿ ಮೋದಿ ಮನವಿ

By

Published : Oct 25, 2020, 1:19 PM IST

ನವದೆಹಲಿ: ಮನ್​ ಕಿ ಬಾತ್​ 70ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದರು ಮತ್ತು ಇದು ಬಿಕ್ಕಟ್ಟುಗಳ ಮೇಲಿನ ತಾಳ್ಮೆಯ ವಿಜಯದ ಹಬ್ಬವಾಗಿದೆ ಎಂದರು.

ಹಬ್ಬಗಳನ್ನು ಸಂಯಮದಿಂದ ಆಚರಿಸಬೇಕು ಮತ್ತು ಶಾಪಿಂಗ್ ಮಾಡುವಾಗ 'ವೋಕಲ್ ಫಾರ್ ಲೋಕಲ್' ಸಂಕಲ್ಪವನ್ನು ನೆನಪಿಸಿಕೊಳ್ಳಬೇಕೆಂದು ಜನರಲ್ಲಿ ಮನವಿ ಮಾಡಿದ್ದಾರೆ.

"ಇಂದು ವಿಜಯ ದಾಶಮಿಯ ಹಬ್ಬ, ಅಂದರೆ ದಸರಾ. ಈ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಈ ದಸರಾ ಹಬ್ಬವು ಅಸತ್ಯದ ಮೇಲೆ ಸತ್ಯದ ವಿಜಯದ ಹಬ್ಬವಾಗಿದೆ. ಆದರೆ ಈ ಸಮಯದಲ್ಲಿ, ಇದು ಬಿಕ್ಕಟ್ಟುಗಳ ಮೇಲೆ ತಾಳ್ಮೆಯ ವಿಜಯವಾಗಿದೆ" ಎಂದು ಹೇಳಿದ್ದಾರೆ.

"ಈ ಹಿಂದೆ, ದುರ್ಗಾ ದೇವಿಯ ದರ್ಶನಕ್ಕಾಗಿ ಹೆಚ್ಚಿನ ಸಂಖ್ಯೆಯ ಜನರು ಸೇರುತ್ತಿದ್ದರು. ಆದರೆ ಈ ಬಾರಿ ಸಾಧ್ಯವಾಗಲಿಲ್ಲ. ಈ ಮೊದಲು ದಸರಾ ದಿನದಂದು ದೊಡ್ಡ ಸಮ್ಮೇಳನಗಳು ಸಹ ನಡೆಯುತ್ತಿದ್ದವು. ಆದರೆ ಈ ಬಾರಿ ಅದರ ರೂಪ ಸಹ ಬದಲಾಗಿದೆ ಎಂದರು.

"ನಾವು ಹಬ್ಬಗಳ ಬಗ್ಗೆ ಯೋಚಿಸುವಾಗ, ಮನಸ್ಸಿಗೆ ಶಾಪಿಂಗ್ ನೆನಪಾಗುತ್ತದೆ. ಈ ಸಮಯದಲ್ಲಿ, ಹಬ್ಬದ ಉತ್ಸಾಹದ ಮಧ್ಯೆ, ನೀವು ಶಾಪಿಂಗ್‌ಗೆ ಹೋದಾಗ 'ವೋಕಲ್ ಫಾರ್ ಲೋಕಲ್'ಎಂಬ ನಿಮ್ಮ ಸಂಕಲ್ಪವನ್ನು ನೆನಪಿಟ್ಟುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ. ಮಾರುಕಟ್ಟೆಯಿಂದ ಸರಕುಗಳನ್ನು ಖರೀದಿಸುವಾಗ ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡಿ" ಎಂದು ಮೋದಿ ಹೇಳಿದ್ದಾರೆ.

ABOUT THE AUTHOR

...view details