ನವದೆಹಲಿ:ಪ್ರಧಾನಮಂತ್ರಿ ನರೇಂದ್ರ ಮೋದಿ 70ನೇ ಹುಟ್ಟುಹಬ್ಬವನ್ನ ದೇಶಾದ್ಯಂತ ಸಂಭ್ರಮದಿಂದ ಹಲವು ವಿಶೇಷತೆಗಳಿಂದ ಆಚರಣೆ ಮಾಡಲಾಯಿತು. ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಅದಕ್ಕೆ ಧನ್ಯವಾದ ಅರ್ಪಿಸಿರುವ ನರೇಂದ್ರ ಮೋದಿ ಕೊರೊನಾ ವೈರಸ್ ವಿರುದ್ಧದ ಹೋರಾಟದ ಪ್ರಯತ್ನದಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತಿ ಅವಶ್ಯವಾಗಿದೆ ಎಂದಿದ್ದಾರೆ.
ನನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಉಡುಗೊರೆಯಾಗಿ ಏನು ಬೇಕು ಎಂದು ಅನೇಕರು ಕೇಳಿದ್ದಾರೆ. ದೋ ಗಜ್ ಕಿ ದೂರಿ(ಎರಡು ಗಜಗಳಷ್ಟು ದೂರ), ಮುಖವಾಡ ಧರಿಸಿ, ಸಾರ್ವಜನಿಕ ಸ್ಥಳಗಳಿಂದ ದೂರವಿರಿ ಹಾಗೂ ನಿಮ್ಮ ಆರೋಗ್ಯದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ ಇದೇ ನೀವೂ ನನಗೆ ನೀಡುವ ಹುಟ್ಟುಹಬ್ಬದ ಉಡುಗೊರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
70ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ನರೇಂದ್ರ ಮೋದಿಗೆ ಅನೇಕರು ವಿಶ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಮೋ, ಜನರ ಸೇವೆ ಮಾಡಲು ನನಗೆ ಶಕ್ತಿ ನೀಡಿದ್ದಕ್ಕೆ ಧನ್ಯವಾದಗಳು.ನನಗೆ ಶುಭ ಹಾರೈಸಿರುವ ಪ್ರತಿಯೊಬ್ಬರಿಗೆ ಆಭಾರಿಯಾಗಿದ್ದೇನೆ ಎಂದಿದ್ದಾರೆ.