ಕೋಲ್ಕತ್ತಾ:ಎರಡು ದಿನಗಳ ಕಾಲ ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಕೋಲ್ಕತ್ತಾದಲ್ಲಿನ ಓಲ್ಡ್ ಕರೆನ್ಸಿ ಕಟ್ಟಡದಲ್ಲಿರುವ ಪ್ರತಿಮೆಯನ್ನು ಹಾಗೂ ಹೌರಾ ಬ್ರಿಡ್ಜ್ನ ಡೈನಾಮಿಕ್ ಆರ್ಕಿಟೆಕ್ಚರಲ್ ಇಲ್ಯೂಮಿನೇಷನ್ ಅನಾವರಣಗೊಳಿಸಿದ್ದಾರೆ.
ಕೋಲ್ಕತ್ತಾ ಬಂದರಿನ 150ನೇ ವಾರ್ಷಿಕೋತ್ಸವ ಪ್ರಯುಕ್ತ ಐತಿಹಾಸಿಕ ರವೀಂದ್ರ ಸೇತು (ಹೌರಾ ಬ್ರಿಡ್ಜ್) ಬಳಿ ಆಕರ್ಷಕ ಧ್ವನಿ,ಬೆಳಕಿನ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಬಳಿಕ ಬ್ರಿಡ್ಜ್ ಸಮೀಪವಿರುವ ಮಿಲೇನಿಯಮ್ ಪಾರ್ಕ್ನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲ ಜಗದೀಪ್ ಧಂಕರ್ ಉಪಸ್ಥಿತರಿದ್ದರು.