ಕರ್ನಾಟಕ

karnataka

ETV Bharat / bharat

ಗೆಳೆಯ ಜೇಟ್ಲಿ ನಿವಾಸಕ್ಕೆ ಮೋದಿ ಭೇಟಿ..! ಕುಟುಂಬಸ್ಥರಿಗೆ ಧೈರ್ಯ ತುಂಬಿದ ಪ್ರಧಾನಿ - ಏಮ್ಸ್​​ ಆಸ್ಪತ್ರೆ

ಅರುಣ್ ಜೇಟ್ಲಿ ನಿಧನದ ವೇಳೆ ವಿದೇಶಿ ಪ್ರವಾಸದಲ್ಲಿದ್ದ ಪ್ರಧಾನಿ ತಮ್ಮ ನೆಚ್ಚಿನ ಮಿತ್ರನ ಅಂತಿಮ ಕಾರ್ಯದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.

ಪ್ರಧಾನಿ ಮೋದಿ

By

Published : Aug 27, 2019, 10:35 AM IST

Updated : Aug 27, 2019, 11:53 AM IST

ನವದೆಹಲಿ: ಅನಾರೋಗ್ಯದಿಂದ ಏಮ್ಸ್​​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ ಮಾಜಿ ಹಣಕಾಸು ಸಚಿವ ಅರುಣ್​ ಜೇಟ್ಲಿ ನಿವಾಸಕ್ಕೆ ಪ್ರಧಾನಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ಗೆಳೆಯ ಜೇಟ್ಲಿ ನಿವಾಸಕ್ಕೆ ಮೋದಿ ಭೇಟಿ

ವಿದೇಶಿ ಪ್ರವಾಸದಲ್ಲಿದ್ದ ಪ್ರಧಾನಿ ತಮ್ಮ ನೆಚ್ಚಿನ ಮಿತ್ರ ಅರುಣ್​ ಜೇಟ್ಲಿ ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ, ಸೌದಿಯಿಂದಲೇ ಮಿತ್ರನ ಅಗಲಿಕೆಗೆ ಕಣ್ಣೀರಿಟ್ಟಿದ್ದರು. ಅವರ ತಮ್ಮ ಒಡನಾಟ ನೆನೆದು ಭಾವುಕರಾಗಿ ಸರಣಿ ಟ್ವೀಟ್​ಗಳ ಮೂಲಕ ನಮನ ಸಲ್ಲಿಸಿದ್ದರು.

ಜಿ-7 ಶೃಂಗದಲ್ಲಿ ಪಾಲ್ಗೊಂಡ ಬಳಿಕ ಇಂದು ನವದೆಹಲಿಗೆ ವಾಪಸ್​ ಆಗಿರುವ ಪ್ರಧಾನಿ ನರೇಂದ್ರ ಮೋದಿ ಮಿತ್ರನ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಮೋದಿ ಆಗಮನಕ್ಕೂ ಮುನ್ನ ಗೃಹ ಸಚಿವ ಅಮಿತ್ ಶಾ ಜೇಟ್ಲಿ ನಿವಾಸಕ್ಕೆ ಆಗಮಿಸಿದ್ದರು. ಅವರ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ಜೇಟ್ಲಿ ಅವರನ್ನ ಕಳೆದುಕೊಂಡ ಕುಟುಂಬಕ್ಕೆ ಪ್ರಧಾನಿ ಧೈರ್ಯ ತುಂಬಿದ್ದು, ಈ ವೇಳೆ ಜೇಟ್ಲಿ ಪತ್ನಿ ಹಾಗೂ ಮಕ್ಕಳಿಬ್ಬರು ಉಪಸ್ಥಿತರಿದ್ದರು.

ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಮೋದಿ

Last Updated : Aug 27, 2019, 11:53 AM IST

ABOUT THE AUTHOR

...view details