ಕರ್ನಾಟಕ

karnataka

ETV Bharat / bharat

ಸಿಐಐ ವಾರ್ಷಿಕ ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ ಪ್ರಧಾನಿ ಮೋದಿ - ಬೆಳವಣಿಗೆಯನ್ನು ಮರಳಿ ಪಡೆಯುವುದು ವಿಷಯದಲ್ಲಿ ಮೋದಿ ಭಾಷಣ

ಭಾರತೀಯ ಕೈಗಾರಿಕಾ ಒಕ್ಕೂಟದ 125 ನೇ ವಾರ್ಷಿಕ ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ, 'ಬೆಳವಣಿಗೆಯನ್ನು ಮರಳಿ ಪಡೆಯುವುದು' ಎಂಬ ವಿಷಯದ ಕುರಿತು ಮಂಗಳವಾರ ಮಾತನಾಡಲಿದ್ದಾರೆ.

PM Modi to share his vision on 'Getting Growth Back' with India Inc on Tuesday
ಸಿಐಐ ವಾರ್ಷಿಕ ಕಾರ್ಯಕ್ರಮದಲ್ಲಿ ಮೋದಿ ಭಾಷಣ

By

Published : May 31, 2020, 7:08 PM IST

ನವದೆಹಲಿ:ಭಾರತೀಯ ಕೈಗಾರಿಕಾ ಒಕ್ಕೂಟ(ಸಿಐಐ)ದ ವಾರ್ಷಿಕ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ 'ಬೆಳವಣಿಗೆಯನ್ನು ಮರಳಿ ಪಡೆಯುವುದು' (Getting Growth Back) ಎಂಬ ವಿಷಯ ಕುರಿತು ಮಂಗಳವಾರ ಮಾತನಾಡಲಿದ್ದಾರೆ.

1895 ರಲ್ಲಿ ಪ್ರಾರಂಭವಾದ ಈ ಸಂಸ್ಥೆಯು 125 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಕೊರೊನಾ ವೈರಸ್​ ಹರಡುವುದನ್ನು ನಿಯಂತ್ರಿಸಲು ದೇಶದಲ್ಲಿ ವಿಧಿಸಿದ್ದ ಲಾಕ್ ಡೌನ್​ ಕ್ರಮೇಣ ಸಡಿಲಿಕೆಗೊಂಡು ಕೈಗಾರಿಕೆಗಳು ತಮ್ಮ ಕಾರ್ಯಾಚರಣೆಯನ್ನು ಪುನಾರಂಭಗೊಳಿಸುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿಯವರ ಭಾಷಣ ಪ್ರಮುಖವೆನಿಸಿದೆ.

ಇಡೀ ದಿನ ನಡೆಯಲಿರುವ ವರ್ಚುವಲ್ ಕಾರ್ಯಕ್ರಮದಲ್ಲಿ ಪಿರಮಾಲ್ ಗ್ರೂಪ್ ಅಧ್ಯಕ್ಷ ಅಜಯ್ ಪಿರಮಾಲ್, ಐಟಿಸಿ ಲಿಮಿಟೆಡ್ ಸಿಎಂಡಿ ಸಂಜೀವ್ ಪುರಿ, ಬಯೋಕಾನ್ ಸಿಎಂಡಿ ಕಿರಣ್ ಮಜುಮ್ದಾರ್-ಶಾ, ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್, ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಸಿಇಒ ಉದಯ್ ಕೊಟಕ್ ಮತ್ತು ಸಿಐಐ ಅಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಸೇರಿದಂತೆ ಘಟಾನುಘಟಿಗಳು ಭಾಗವಹಿಸಲಿದ್ದಾರೆ.

ABOUT THE AUTHOR

...view details