ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಜನ್ ಆಂದೋಲನ್ ಕ್ಯಾಂಪೇನ್ಗೆ ಚಾಲನೆ ನೀಡಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಮುಂದಿನ ಎರಡು ತಿಂಗಳ ಕಾಲ ದೇಶದಲ್ಲಿ ಹಬ್ಬಗಳು ಹೆಚ್ಚಾಗಿರುವ ಕಾರಣ ಜನ್ ಆಂದೋಲನ ಕ್ಯಾಂಪೇನ್ಗೆ ನಮೋ ಚಾಲನೆ ನೀಡಲು ನಿರ್ಧರಿಸಿದ್ದಾರೆ. ಈ ಕ್ಯಾಂಪೆನ್ ಮೂಲಕ ಜನರು ಕೊರೊನಾ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಹಾಗೂ ಇತರರಿಗೆ ಮಾಹಿತಿ ನೀಡುವುದಾಗಿದ್ದು, ಮಾಸ್ಕ್ ಹಾಕಿಕೊಳ್ಳುವುದು, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸ್ ಬಳಕೆ ಮಾಡುವುದೇ ಜನಾಂದೋಲನದ ಪ್ರಮುಖಾಂಶವಾಗಿದೆ.
ಮುಂಬರುವ ಹಬ್ಬಗಳು, ಚಳಿಗಾಲದ ಅವಧಿ ಮತ್ತು ಆರ್ಥಿಕತೆ ಮತ್ತಷ್ಟು ಸಡಲಿಕೆ ಮಾಡುವ ದೃಷ್ಟಿಯಿಂದ ಪ್ರಧಾನಿ ಮೋದಿ ಈ ಕ್ಯಾಂಪೇನ್ಗೆ ಚಾಲನೆ ನೀಡಲಿದ್ದು, ಇದರಲ್ಲಿ ಹೆಚ್ಚಿನ ಜನರು ಭಾಗವಹಿಸುವಿಕೆ ಉತ್ತೇಜಿಸುವ ಸಾಧ್ಯತೆ ಇದೆ. ದೇಶದ ಕೆಲವೊಂದು ರಾಜ್ಯಗಳಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳಿರುವ ಕಾರಣ ಸಂದೇಶ ರವಾನೆ, ಮಾಧ್ಯಮ ಬಳಿಸಿಕೊಂಡು ಮಾಹಿತಿ ಪ್ರಸಾರ ಮಾಡುವುದು ಪ್ರಮುಖ ಉದ್ದೇಶವಾಗಿದೆ.
ಹೋರ್ಡಿಂಗ್ಗಳು, ಗೋಡೆ ವರ್ಣಚಿತ್ರಗಳು, ಎಲೆಕ್ಟ್ರಾನಿಕ್ ಬೋರ್ಡ್ ಬಳಕೆ ಮಾಡುವುದರ ಜತೆಗೆ ರಾಷ್ಟ್ರೀಯ ಪ್ರಭಾವಿ ವ್ಯಕ್ತಿಗಳ ಪಾಲ್ಗೊಳ್ಳುವಿಕೆ, ಜಾಗೃತಿ ಆಡಿಯೋ ಸಂದೇಶ ಹಾಗೂ ಕರಪತ್ರಗಳು ಸೇರಿವೆ.