ಕರ್ನಾಟಕ

karnataka

ETV Bharat / bharat

ಫಿಟ್​ನೆಸ್ ಮಂತ್ರ ತಿಳಿಯಲು ಮೋದಿಯೊಂದಿಗೆ 'ಫಿಟ್ ಇಂಡಿಯಾ ಸಂವಾದ'ದಲ್ಲಿ ಭಾಗವಹಿಸಿ

'ಫಿಟ್​ ಇಂಡಿಯಾ ಅಭಿಯಾನ' ಒಂದು ವರ್ಷ ಪೂರೈಸಿರುವ ಹಿನ್ನೆಲೆ ಫಿಟ್​ನೆಸ್​ಗೆ ಸ್ಫೂರ್ತಿಯಾಗಿರುವ ಮತ್ತು ಸಮಾಜದಲ್ಲಿ ಆದರ್ಶಪ್ರಾಯರಾಗಿರುವ ಐಕಾನ್​​ಗಳ ಜೊತೆ ಇಂದು ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮೋದಿ ಆನ್​​ಲೈನ್ ಸಂವಾದ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜನರನ್ನು ಪ್ರಧಾನಿ ಒತ್ತಾಯಿಸಿದ್ದಾರೆ.

PM Modi
ಪಿಎಂ ಮೋದಿ

By

Published : Sep 24, 2020, 11:39 AM IST

Updated : Sep 24, 2020, 11:48 AM IST

ನವದೆಹಲಿ: ದೇಶಾದ್ಯಂತ ಕೊರೊನಾ ಮಹಾಮಾರಿ ಆತಂಕ ಹುಟ್ಟಿಸಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅತ್ಯಗತ್ಯ. ಇದಕ್ಕಾಗಿ ಉತ್ತಮ ಆಹಾರದ ಜೊತೆಗೆ ವ್ಯಾಯಾಮವೂ ದಿನ ನಿತ್ಯದ ಅಭ್ಯಾಸವೇ ಆಗಿ ಹೋಗಿದೆ. ಯಾಕೆಂದರೆ, ನಮ್ಮ ದೇಹವನ್ನು ಫಿಟ್​ ಆಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.

ಕೇಂದ್ರ ಸರ್ಕಾರ ಕಳೆದ ವರ್ಷವೇ ಫಿಟ್​ ಇಂಡಿಯಾ ಅಭಿಯಾನವನ್ನೂ ಆರಂಭಿಸಿದೆ. ಈಗ ಅಭಿಯಾನಕ್ಕೆ ಒಂದು ವರ್ಷ ತುಂಬಿದೆ. ದೇಶದ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿರುವ ಒಂದು ರೀತಿಯ ಆಂದೋಲನ ಈ ಫಿಟ್​ ಇಂಡಿಯಾ.

'ಫಿಟ್​ ಇಂಡಿಯಾ ಅಭಿಯಾನ' ಒಂದು ವರ್ಷ ಪೂರೈಸಿರುವ ಹಿನ್ನೆಲೆ ಫಿಟ್​ನೆಸ್​ಗೆ ಸ್ಫೂರ್ತಿಯಾಗಿರುವ ಮತ್ತು ಸಮಾಜದಲ್ಲಿ ಆದರ್ಶಪ್ರಾಯರಾಗಿರುವ ಐಕಾನ್​​ಗಳ ಜೊತೆ ಇಂದು ಪ್ರಧಾನಿ ಮೋದಿ ಆನ್​​ಲೈನ್ ಸಂವಾದ ನಡೆಸಲಿದ್ದಾರೆ.

ಇಂದು ಮಧ್ಯಾಹ್ನ 12 ಗಂಟೆಗೆ ಆರಂಭವಾಗುವ ಈ ಸಂವಾದ ಕಾರ್ಯಕ್ರಮದಲ್ಲಿ ಪಿಎಂ ಮೋದಿ ಜೊತೆ ಟೀಂ ಇಂಡಿಯಾ ನಾಯಕ ಕ್ರಿಕೆಟಿಗ ವಿರಾಟ್ ಕೊಹ್ಲಿ, ಮಾಡೆಲ್ ಮತ್ತು ಓಟಗಾರ ಮಿಲಿಂದ್ ಸೋಮನ್, ಪೌಷ್ಟಿಕ ಆಹಾರ ತಜ್ಞೆ ರುಜುತಾ ದಿವೇಕರ್ ಮತ್ತು ಫಿಟ್​ನೆಸ್​ಗೆ ಸ್ಫೂರ್ತಿಯಾಗಿರುವ ಇತರರು ಭಾಗವಹಿಸಲಿದ್ದಾರೆ.

ಇವರೆಲ್ಲರ ಫಿಟ್​ನೆಸ್​ ಮಂತ್ರ ತಿಳಿದುಕೊಳ್ಳಲು ದೇಶದ ಜನರಷ್ಟೇ ಅಲ್ಲ ಸ್ವತಃ ಪ್ರಧಾನಿ ಮೋದಿಯವರೇ ಬಹಳ ಉತ್ಸುಕರಾಗಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜನರನ್ನು ಒತ್ತಾಯಿಸಿ ಟ್ವೀಟ್​ ಮಾಡಿರುವ ಮೋದಿ, "ನೀವು ಈಗಾಗಲೇ ಫಿಟ್​ನೆಸ್ ಅಭಿಮಾನಿಯಾಗಿದ್ದೀರಾ? ಫಿಟ್​ನೆಸ್ ಅನ್ನು ನಿಮ್ಮ ದಿನಚರಿಯ ಭಾಗವಾಗಿಸಲು ನೀವು ಬಯಸುತ್ತೀರಾ? ಪೌಷ್ಠಿಕ ಆಹಾರ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಲು ನಾನೂ ಬಹಳ ಖುಷಿಯಿಂದ, ಉತ್ಸುಕನಾಗಿ ಬರುತ್ತಿದ್ದೇನೆ. ಮಧ್ಯಾಹ್ನ 12 ಗಂಟೆಗೆ ನಿಮ್ಮನ್ನ ಕಾಣುವೆ" ಎಂದು ಹೇಳಿದ್ದಾರೆ.

ಆಸಕ್ತರು https://pmindiawebcast.nic.in ಲಿಂಕ್​ ಬಳಸಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

Last Updated : Sep 24, 2020, 11:48 AM IST

ABOUT THE AUTHOR

...view details