ಕರ್ನಾಟಕ

karnataka

ETV Bharat / bharat

ಅಕ್ಟೋಬರ್ 24ಕ್ಕೆ ಏಷ್ಯಾದ ಅತಿ ಉದ್ದದ ರೋಪ್​ವೇ ಉದ್ಘಾಟನೆ - ಏಷ್ಯಾ ಅತಿ ಉದ್ದದ ರೋಪ್​ವೇ

ಅಕ್ಟೋಬರ್ 24ಕ್ಕೆ ಏಷ್ಯಾದ ಅತಿ ಉದ್ದದ ರೋಪ್​ವೇ ಅನ್ನು ಪ್ರಧಾನಿ ಮೋದಿ ಗುಜರಾತ್​ನ ಜುನಾಗಢದಲ್ಲಿ ವಿಡಿಯೋ ಕಾನ್ಫರೆನ್ಸ್​​ ಮೂಲಕ ಉದ್ಘಾಟನೆ ಮಾಡಲಿದ್ದಾರೆ.

ropeway
ರೋಪ್​ವೇ

By

Published : Oct 21, 2020, 8:03 PM IST

ಜುನಾಗಢ (ಗುಜರಾತ್​):ಅಕ್ಟೋಬರ್ 24ರಂದು ಗುಜರಾತ್​ನ ಜುನಾಗಢದ ಗಿರ್ನಾರ್​​​​​ನಲ್ಲಿ ನಿರ್ಮಾಣವಾಗಿರುವ ಏಷಿಯಾದ ಅತಿ ದೊಡ್ಡ ರೋಪ್​ವೇ ಅನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ.

ರೋಪ್​ವೇ ಉದ್ಘಾಟನೆ ವೇಳೆ ಗುಜರಾತ್ ಸಿಎಂ ವಿಜಯ್ ರೂಪಾಣಿ ಜುನಾಗಢದಿಂದ ಹಾಗೂ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅಹಮದಾಬಾದ್​​ನಿಂದ​ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಮೋದಿ ಕನಸಿನ ಯೋಜನೆ ಇದಾಗಿದ್ದು, ಅವರು ಗುಜರಾತ್ ಸಿಎಂ ಆಗಿದ್ದಾಗ ಈ ಯೋಜನೆಯ ಶಂಕುಸ್ಥಾಪನೆ ನಡೆಸಿದ್ದರು. ಅಧಿಕೃತ ಮೂಲಗಳ ಪ್ರಕಾರ ಈ ರೋಪ್​ ವೇ 2.3 ಕಿಲೋಮೀಟರ್ ಉದ್ದವಿದ್ದು, ಸುಮಾರು 130 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ.

ಈ ರೋಪ್​ವೇ ಮೂಲಕ ಒಂದು ಗಂಟೆಗೆ 800 ಮಂದಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಬಹುದಾಗಿದೆ. ಕೇವಲ 8 ನಿಮಿಷಗಳಲ್ಲಿ 2.13 ಕಿಲೋಮೀಟರ್ ರೋಪ್​ವೇ ಮೂಲಕ ಪ್ರಯಾಣಿಸಬಹುದಾಗಿದೆ.

ರೋಪ್​ವೇ ಮೂಲಕ ಭವನಾಥ್ ದೇವಾಲಯದಿಂದ ಅಂಬಾಜಿ ದೇವಾಲಯಕ್ಕೆ ಕೇವಲ 10 ನಿಮಿಷಗಳಲ್ಲಿ ತಲುಪಬಹುದಾಗಿದೆ. ಒಬ್ಬರಿಗೆ 700 ರೂಪಾಯಿ ಟಿಕೆಟ್​ ಅನ್ನು ನಿಗದಿಪಡಿಸುವ ಸಾಧ್ಯತೆ ಇದ್ದು, ಇನ್ನೂ ಅಧಿಕೃತವಾಗಿ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಯೋಜನೆ ಮೇ ತಿಂಗಳಲ್ಲಿ ಆರಂಭವಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಇದನ್ನು ಮುಂದೂಡಲಾಗಿತ್ತು. ಸೆಪ್ಟೆಂಬರ್​ನಲ್ಲಿ ಪ್ರಾಯೋಗಿಕವಾಗಿ ಓಡಾಟ ಆರಂಭಿಸಲಾಗಿತ್ತು. ಈಗ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದೆ.

ABOUT THE AUTHOR

...view details