ಕರ್ನಾಟಕ

karnataka

ETV Bharat / bharat

ಮೋದಿ, ಸ್ಕಾಟ್‌ ಮಾರಿಸನ್‌ 'ಆನ್‌ಲೈನ್'‌ ಚರ್ಚೆ: ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಮಹತ್ವ - ವಿಡಿಯೋ ಕಾನ್ಫರೆನ್ಸ್‌

ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ಇಂದು ವಿಡಿಯೋ ಸಂವಾದ ನಡೆಸಿದ್ದಾರೆ. ಆಸ್ಟ್ರೇಲಿಯಾದೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಬಲಗೊಳಿಸಲು ಭಾರತ ಬದ್ಧವಾಗಿದೆ. ಇದು ಕೇವಲ ಎರಡು ರಾಷ್ಟ್ರಗಳ ನಡುವಣ ಸಂಬಂಧವಲ್ಲ, ಇಡೀ ಇಂಡೋ-ಪೆಸಿಫಿಕ್‌ ಮತ್ತು ವಿಶ್ವಮಟ್ಟದಲ್ಲಿ ಬಲಗೊಳ್ಳಬೇಕಿದೆ ಎಂದು ಪ್ರಧಾನಿ ಮೋದಿ ಸಂವಾದದಲ್ಲಿ ಹೇಳಿದರು.

pm-modi-to-hold-virtual-summit-with-aussie-counterpart-morrison-on-thursday
ಪ್ರಧಾನಿ ಮೋದಿ, ಆಸೀಸ್‌ ಪ್ರಧಾನಿ ಸ್ಕಾಟ್‌ ಮಾರಿಸನ್‌ 'ಆನ್‌ಲೈನ್'‌ ದ್ವಿಪಕ್ಷೀಯ ಮಾತುಕತೆ

By

Published : Jun 4, 2020, 12:59 PM IST

Updated : Jun 4, 2020, 1:39 PM IST

ನವದೆಹಲಿ: ಆಸ್ಟ್ರೇಲಿಯಾದೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಬಲಗೊಳಿಸಲು ಭಾರತ ಬದ್ಧವಾಗಿದೆ. ಇದು ಕೇವಲ ಎರಡು ರಾಷ್ಟ್ರಗಳ ಸಂಬಂಧವಲ್ಲ, ಇಡೀ ಇಂಡೋ-ಪೆಸಿಫಿಕ್‌ ಮತ್ತು ವಿಶ್ವಮಟ್ಟದಲ್ಲಿ ಬಲಗೊಳ್ಳಬೇಕಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್‌ ವಿಡಿಯೋ ಸಂವಾದ

ನಮ್ಮ ಸರ್ಕಾರ ಕೋವಿಡ್‌-19 ಅನ್ನು ಒಂದು ಅವಕಾಶವೆಂದು ಪರಿಗಣಿಸಿದೆ. ಎಲ್ಲಾ ವಲಯಗಳಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದ್ದು, ಅತಿ ಶೀಘ್ರದಲ್ಲೇ ತಳಮಟ್ಟದಿಂದಲೇ ಫಲಿತಾಂಶ ಹೊರಬೀಳಲಿದೆ ಎಂದು ಮೋದಿ ಹೇಳಿದರು.

ಸಂವಾದದ ವೇಳೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌, ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಹಣಾ ಮಂಡಳಿಗೆ ಭಾರತದ ನಾಯಕತ್ವವನ್ನು ಬೆಂಬಲಿಸಿದ್ದೆ. ಮಂಡಳಿಗೆ ಮುಖ್ಯಸ್ಥರನ್ನು ನೇಮಕ ಮಾಡುವುದು ಅತ್ಯಂತ ಪ್ರಮುಖ ವಿಷಯವಾಗಿತ್ತು. ಆರೋಗ್ಯ ಕ್ಷೇತ್ರದಲ್ಲಿ ಉಂಟಾಗಿರುವ ಕಠಿಣ ಸಮಸ್ಯೆಗಳನ್ನು ಎದುರಿಸಲು ಭಾರತದ ನಾಯಕತ್ವ ಶಕ್ತವಾಗಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಉಭಯ ದೇಶಗಳ ಆರೋಗ್ಯ, ಉತ್ತಮ ಜೀವನ ಮತ್ತು ಭದ್ರತೆಯ ಬಗ್ಗೆ ಇಬ್ಬರು ನಾಯಕರು ಜವಾಬ್ದಾರಿಗಳನ್ನು ಹಂಚಿಕೊಂಡಿದ್ದೇವೆ. ಈವೊಂದು ವೇದಿಕೆ ಹಲವಾರು ವಿಚಾರಗಳ ಕುರಿತ ಚರ್ಚೆಗೆ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದು ಸ್ಕಾಟ್‌ ಮಾರಿಸನ್‌ ತಿಳಿಸಿದ್ದಾರೆ.

ಇಂಡೋ-ಪೆಸಿಫಿಕ್‌ ಭಾಗದಲ್ಲಿ ಭಾರತದ ಪಾತ್ರ, ಬೆಳವಣಿಗೆಗಳ ಬಗ್ಗೆ ಮುಕ್ತವಾಗಿ ಮಾತುಕತೆಗೆ ಬದ್ಧರಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಇನ್ನಷ್ಟು ಸವಾಲುಗಳನ್ನು ಎದುರಿಸಬೇಕಿದೆ ಎಂದು ಮಾರಿಸನ್‌ ಸಂವಾದದ ಬಳಿಕ ಟ್ವೀಟ್‌ ಮಾಡಿದ್ದಾರೆ.

ಮೋದಿ ಹಗ್‌ ಮತ್ತು ನಮ್ಮ ಸಮೋಸ ಪ್ರಸ್ತಾಪಿಸಿದ ಆಸೀಸ್ ಪ್ರಧಾನಿ
ಮುಂದಿನ ಬಾರಿ ಮೋದಿ ಅವರನ್ನು ಭೇಟಿ ಮಾಡಿದಾಗ ಜನಪ್ರಿಯ 'ಮೋದಿ ಹಗ್'‌ ಮತ್ತು ನಮ್ಮ ಸಮೋಸವನ್ನು ಹಂಚಿಕೊಳ್ಳುತ್ತೇನೆ. ಆಗ ಗುಜರಾತ್‌ ಕಿಚಡಿಯನ್ನೂ ಸೇವಿಸುತ್ತೇನೆ ಎಂದು ಅವರು ಆರಂಭದಲ್ಲಿ ಹೇಳುತ್ತಿದ್ದಂತೆ ಮೋದಿ ನಗುತ್ತಾ ಪ್ರತಿಕ್ರಿಯಿಸಿದರು.

Last Updated : Jun 4, 2020, 1:39 PM IST

ABOUT THE AUTHOR

...view details