ನವದೆಹಲಿ: ಆಗಾಗ್ಗೆ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುವ ಪ್ರಧಾನಿ ಮೋದಿ ಇದೀಗ ಖ್ಯಾತ ಇಂಗ್ಲಿಷ್ ಟಿವಿ ಶೋ ಮ್ಯಾನ್ ವರ್ಸಸ್ ವೈಲ್ಡ್ನಲ್ಲಿ ಭಾಗವಹಿಸಿದ್ದು, ಶೋ ಚಿತ್ರೀಕರಣಗೊಂಡಿರುವ ಜಾಗದ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಪ್ರಸ್ತುತ ಲಭ್ಯವಾಗಿರುವ ಮಾಹಿತಿ ಪ್ರಕಾರ, ಬೇರ್ ಗ್ರಿಲ್ಸ್ ನಿರೂಪಣೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿರುವ ಮ್ಯಾನ್ ವರ್ಸಸ್ ವೈಲ್ಡ್ ಶೋ ಉತ್ತರಾಖಂಡದ ವನ್ಯಜೀವಿ ಅಭಯಾರಣ್ಯವಾದ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ನಲ್ಲಿ ಚಿತ್ರೀಕರಿಸಲಾಗಿದೆ.
ಭಾರತದ ದಟ್ಟ ಕಾಡುಗಳಲ್ಲಿ ಪ್ರಧಾನಿ ಮೋದಿ ಪಯಣ..! ಏನಿದು...?
ಸದ್ಯ ಮೋದಿ ಭಾಗವಹಿಸಿರುವ ಶೋ ಟೀಸರ್ ಅನ್ನು ಕಾರ್ಯಕ್ರಮದ ನಿರೂಪಕ ಬೇರ್ ಗ್ರಿಲ್ಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೇರ್ ಗ್ರಿಲ್ಸ್ ಟೀಸರ್ ಶೇರ್ ಮಾಡುತ್ತಿದ್ದಂತೆ ಮೋದಿ ಟ್ವಿಟರ್ ಟ್ರೆಂಡ್ ಆಗಿದ್ದರು. ಜೊತೆಗೆ ಬೇರ್ ಗ್ರಿಲ್ಸ್ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಮೋದಿ, ಈ ಶೋ ನಿಮ್ಮನ್ನು ಭಾರತದ ವಿವಿಧ ಅಭಯಾರಣ್ಯಕ್ಕೆ ತೆರಳುವಂತೆ ಪ್ರೇರೇಪಿಸಲಿದೆ ಎಂದಿದ್ದಾರೆ. ಬೇರ್ಗ್ರಿಲ್ಸ್ಗೆ ಭಾರತಕ್ಕೆ ಬಂದಿರುವುದಕ್ಕೆ ಮೋದಿ ಟ್ವೀಟ್ನಲ್ಲಿ ಧನ್ಯವಾದ ಹೇಳಿದ್ದಾರೆ.
ಅಂದ ಹಾಗೆ ಪ್ರಧಾನಿ ಮೋದಿ ಭಾಗವಹಿಸಿರುವ ಹಾಗೂ ಸದ್ಯ ಎಲ್ಲರ ಕುತೂಹಲ ಮೂಡಿಸಿರುವ ಬಹುನಿರೀಕ್ಷಿತ ಈ ಸಂಚಿಕೆ ಆಗಸ್ಟ್ 12ರ ರಾತ್ರಿ ಒಂಭತ್ತು ಗಂಟೆಗೆ ಡಿಸ್ಕವರಿ ಚಾನೆಲ್ನಲ್ಲಿ ಪ್ರಸಾರವಾಗಲಿದೆ.