ನವದೆಹಲಿ:ದೇಶದ ಆರ್ಥಿಕತೆ ಉತ್ತೇಜಿಸಲು ಮತ್ತುಹೂಡಿಕೆದಾರರನ್ನು ಆಕರ್ಷಿಸುವ ಸಲುವಾಗಿ ವರ್ಚ್ಯುಯಲ್ ಗ್ಲೋಬಲ್ ಇನ್ವೆಸ್ಟರ್ ರೌಂಡ್‌ಟೇಬಲ್-2020(ವಿಜಿಐಆರ್) ಇಂದು ಸಭೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವದ ವಿವಿಧ ಭಾಗಗಳ 20 ಉನ್ನತ ಸಾಂಸ್ಥಿಕ ಹೂಡಿಕೆದಾರರು ಮುಖ್ಯಸ್ಥರು ಭಾಗವಹಿಸಲಿದ್ದಾರೆ.
ದೇಶದ ಆರ್ಥಿಕತೆ, ಹೂಡಿಕೆ ದೃಷ್ಟಿಕೋನ, ರಚನಾತ್ಮಕ ಸುಧಾರಣೆಗಳು ಮತ್ತು ದೇಶವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ದೃಷ್ಟಿಕೋನದಿಂದ ಸುತ್ತಮುತ್ತಲಿನ ಸಮಸ್ಯೆಗಳ ಚರ್ಚಿಸಲು ಕೇಂದ್ರ ಸರ್ಕಾರ ವಿಜಿಐಆರ್-2020 ಮೇಲೆ ಕೇಂದ್ರೀಕರಿಸಿದೆ.
ಸಾರ್ವಭೌಮ ಸಂಪತ್ತು ನಿಧಿಗಳು ಮತ್ತು ವಿಶ್ವದ ಪಿಂಚಣಿ ನಿಧಿಗಳು ಸೇರಿದಂತೆ ಎಲ್ಲ ಪ್ರಮುಖ ಜಾಗತಿಕ ಹೂಡಿಕೆದಾರರು ಭಾಗವಹಿಸಲಿದ್ದಾರೆ. ಅವರಿಗೆ (ಹೂಡಿಕೆದಾರರಿಗೆ) ಭಾರತದ ವಿವಿಧ ಹೂಡಿಕೆ ಅವಕಾಶಗಳು, ಭಾರತದ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಮತ್ತು ಅವರಿಗೆ ಯಾವ ಅವಕಾಶಗಳಿವೆ ಎಂಬುದರ ಕುರಿತು ಮಾಹಿತಿ ನೀಡಲಾಗುವುದು ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದರು