ಕರ್ನಾಟಕ

karnataka

ETV Bharat / bharat

ಅಮೆರಿಕಾ-ಭಾರತ ಕಾರ್ಯತಂತ್ರ ಪಾಲುದಾರಿಕೆ ವೇದಿಕೆಯಲ್ಲಿ ಪಿಎಂ ಮೋದಿ ಮಾತು - ಯುಎಸ್​ಐಎಸ್​ಪಿಎಫ್

ಯುಎಸ್-ಇಂಡಿಯಾ ಕಾರ್ಯತಂತ್ರ ಪಾಲುದಾರಿಕೆ ವೇದಿಕೆಯ ಸಭೆಯನ್ನುದ್ದೇಶಿಸಿ ಇಂದು ರಾತ್ರಿ 9 ಗಂಟೆಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.

PM Modi
ಪ್ರಧಾನಿ ನರೇಂದ್ರ ಮೋದಿ

By

Published : Sep 3, 2020, 11:14 AM IST

ನವದೆಹಲಿ: ಇಂದು ನಡೆಯಲಿರುವ ಯುಎಸ್-ಇಂಡಿಯಾ ಕಾರ್ಯತಂತ್ರ ಪಾಲುದಾರಿಕೆ ವೇದಿಕೆಯ (USISPF) 3ನೇ ವಾರ್ಷಿಕ ನಾಯಕತ್ವ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ರಾತ್ರಿ 9 ಗಂಟೆಗೆ ಪ್ರಧಾನಿ ಮೋದಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ (ಪಿಎಂಒ) ಬುಧವಾರ ಮಾಹಿತಿ ನೀಡಿದೆ.

ಯುಎಸ್​ಐಎಸ್​ಪಿಎಫ್ ಲಾಭ ರಹಿತ ಸಂಸ್ಥೆಯಾಗಿದ್ದು, ಭಾರತ ಮತ್ತು ಅಮೆರಿಕಾ ನಡುವಿನ ಪಾಲುದಾರಿಕೆಗಾಗಿ ಕಾರ್ಯನಿರ್ವಹಿಸುತ್ತದೆ. ಐದು ದಿನಗಳ ಕಾಲ ನಡೆಯಲಿರುವ ಶೃಂಗಸಭೆ ಆಗಸ್ಟ್ 31ರಂದು ಪ್ರಾರಂಭವಾಗಿದ್ದು, "ಯುಎಸ್-ಇಂಡಿಯಾದ ಹೊಸ ಸವಾಲುಗಳಿಗೆ ಪರಿಹಾರಗಳು" ಎಂಬುದು ಈ ಬಾರಿಯ ಸಭೆಯ ವಿಷಯವಾಗಿದೆ.

ಜಾಗತಿಕ ಉತ್ಪಾದನಾ ಕೇಂದ್ರವಾಗಲು ಭಾರತಕ್ಕಿರುವ ಸಾಮರ್ಥ್ಯ, ಭಾರತದ ಅನಿಲ ಮಾರುಕಟ್ಟೆಯಲ್ಲಿನ ಅವಕಾಶಗಳು, ಭಾರತದಲ್ಲಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಆಕರ್ಷಿಸಲು ಇರುವ ಸುಲಭ ಮಾರ್ಗಗಳು, ಇಂಡೋ-ಪೆಸಿಫಿಕ್ ಆರ್ಥಿಕ ವಿಷಯಗಳು ಸೇರಿದಂತೆ ಮುಂತಾದ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು.

ABOUT THE AUTHOR

...view details