ಹೈದರಾಬಾದ್ (ತೆಲಂಗಾಣ):ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಿಂದ ಪದವಿ ಪಡೆಯಲಿರುವ ಐಪಿಎಸ್ ಪ್ರೊಬೇಷನರ್‌ಗಳ (2018 ಬ್ಯಾಚ್) ಪಾಸಿಂಗ್ ಔಟ್ ಪರೇಡ್ನಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಒಪ್ಪಿದ್ದಾರೆ ಎಂದು ಅಕಾಡೆಮಿಯ ನಿರ್ದೇಶಕ ಅತುಲ್ ಕಾರ್ವಾಲ್ ತಿಳಿಸಿದ್ದಾರೆ. ಪ್ರಧಾನಿ ವಿಡಿಯೋ ಕಾನ್ಫರೆನ್ಸ್ ಮೂಲಕ ಐಪಿಎಸ್ ಪ್ರೊಬೇಷನರ್‌ಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ನಾಳೆ ಐಪಿಎಸ್ ಪ್ರೊಬೇಷನರ್‌ಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ - 2018 IPS POP
ಹೈದರಾಬಾದ್‌ನ ಸರ್ದಾರ್ ವಲ್ಲಭಭಾಯ್ ಪಟೇಲ್ ನ್ಯಾಷ್ನಲ್ ಪೊಲೀಸ್ ಅಕಾಡೆಮಿಯಿಂದ 28 ಮಹಿಳಾ ಪ್ರೊಬೇಷನರ್‌ಗಳು ಸೇರಿದಂತೆ 131 ಐಪಿಎಸ್ ಪ್ರೊಬೇಷನರ್‌ಗಳು ತರಬೇತಿ ಮುಗಿಸಿದ್ದಾರೆ. ಕರ್ತವ್ಯಕ್ಕೆ ನಿಯೋಜನೆ ಆಗುವ ಮುನ್ನ ನಡೆಯುವ ಪಾಸಿಂಗ್ ಔಟ್ ಪರೇಡ್ನಲ್ಲಿ ಪಿಎಂ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಹೈದರಾಬಾದ್‌ನ ಸರ್ದಾರ್ ವಲ್ಲಭಭಾಯ್ ಪಟೇಲ್ ನ್ಯಾಷ್ನಲ್ ಪೊಲೀಸ್ ಅಕಾಡೆಮಿಯಿಂದ 28 ಮಹಿಳಾ ಪ್ರೊಬೇಷನರ್‌ಗಳು ಸೇರಿದಂತೆ 131 ಐಪಿಎಸ್ ಪ್ರೊಬೇಷನರ್‌ಗಳು ತರಬೇತಿ ಮುಗಿಸಿದ್ದಾರೆ. ಕರ್ತವ್ಯಕ್ಕೆ ನಿಯೋಜನೆ ಆಗುವ ಮುನ್ನ ನಡೆಯುವ ಪಾಸಿಂಗ್ ಔಟ್ ಪರೇಡ್ನಲ್ಲಿ ಪಿಎಂ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿರಲು ಒಪ್ಪಿಕೊಂಡಿರುವುದು ಹೆಮ್ಮೆಯ ಮತ್ತು ಸಂತೋಷದ ವಿಷಯ ಎಂದು ಅತುಲ್ ಕಾರ್ವಾಲ್ ಹೇಳಿದ್ದಾರೆ.
ಐಪಿಎಸ್ ಪ್ರೊಬೇಷನರ್ ಡಿ.ವಿ.ಕಿರಣ್ ಶ್ರುತಿ ಮಾತನಾಡಿ, ಅತ್ಯುತ್ತಮ ಪ್ರೊಬೇಷನರ್ ಆಗುವುದು ಸಂತಸದ ವಿಚಾರ. ನನ್ನನ್ನು ತಮಿಳುನಾಡು Cadreಗೆ ನೇಮಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಜೊತೆಗೆ ರಾಷ್ಟ್ರದ ಸೇವೆ ಸಲ್ಲಿಸಲು ನಾನು ಆಶಿಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನೋರ್ವ ಐಪಿಎಸ್ ಪ್ರೊಬೇಷನರ್ ಕೆ.ವಿಜಯ್ ಶಂಕರ್, ರಾಷ್ಟ್ರದ ಸೇವೆ ಮಾಡಲು ಕೆಲವೇ ಕೆಲ ಜನರಿಗೆ ಈ ಅವಕಾಶ ದೊರೆತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು. ನನ್ನ ತಂದೆ ಮತ್ತು ಅಜ್ಜ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ದೇಶ ಸೇವೆಗೆ ನಾನು ಸಿದ್ಧ ಎಂದಿದ್ದಾರೆ.