ನವದೆಹಲಿ: ಭಾರತೀಯ ವಾಣಿಜ್ಯ ಮಂಡಳಿಯ 95ನೇ ವಾರ್ಷಿಕ ಸಮಗ್ರ ಅಧಿವೇಶನದ ಉದ್ಘಾಟನಾ ಭಾಷಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾಡಲಿದ್ದಾರೆ.
ಭಾರತೀಯ ವಾಣಿಜ್ಯ ಮಂಡಳಿಯ ಅಧಿವೇಶನದಲ್ಲಿಂದು ಪ್ರಧಾನಿ ಭಾಷಣ - ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ
ಈ ಮೊದಲು ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿಯ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಪ್ರಧಾನಿ ಮೋದಿ ಇಂದು ಭಾರತೀಯ ವಾಣಿಜ್ಯ ಮಂಡಳಿ ಅಧಿವೇಶನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ.
ಪ್ರಧಾನಿ ಮೋದಿ
ಜೂನ್ 2ರಂದು ಪ್ರಧಾನಿ ಮೋದಿ ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ)ಯ 125ನೇ ವರ್ಷದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಮಾತನಾಡಿದ್ದರು. ಈ ವೇಳೆ ಜಗತ್ತು ವಿಶ್ವಾಸಾರ್ಹ ಪಾಲುದಾರ ಹಾಗೂ ಸ್ನೇಹಿತನನ್ನು ಹುಡುಕುತ್ತಿದ್ದು, ಭಾರತವು ಈ ವಿಶ್ವಾಸದ ಲಾಭ ಪಡೆದುಕೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದರು. ಈಗ ಭಾರತೀಯ ವಾಣಿಜ್ಯ ಮಂಡಳಿಯ 95ನೇ ವಾರ್ಷಿಕೋತ್ಸವದಲ್ಲಿ ಮೋದಿ ಮಾತು ಕುತೂಹಲ ಕೆರಳಿಸಿದೆ.
Last Updated : Jun 11, 2020, 10:01 AM IST