ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ 69ನೇ ಆವೃತ್ತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮನ್ ಕಿ ಬಾತ್ ಆರಂಭಗೊಳ್ಳಲಿದ್ದು, ಈ ಬಗ್ಗೆ ಪ್ರಧಾನಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಈ ಬಾರಿ ಯಾವ ವಿಚಾರದ ಕುರಿತು ಪ್ರಧಾನಿ ಮೋದಿ ಮಾತನಾಡಲಿದ್ದಾರೆ ಎಂಬ ಕುತೂಹಲ ದೇಶದ ಜನರಲ್ಲಿದೆ.
ಭಾರತವನ್ನು ಆಟಿಕೆಗಳ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ದೇಶದ ಆರಂಭಿಕ ಉದ್ಯಮಗಳು ಒಗ್ಗೂಡಬೇಕೆಂದು ಪ್ರಧಾನಿ ತಮ್ಮ ಹಿಂದಿನ ಭಾಷಣದಲ್ಲಿ ಕರೆ ನೀಡಿದ್ದರು. ಆಟಿಕೆ ಉತ್ಪಾದನೆಗೆ ಭಾರತವು ಕೇಂದ್ರವಾಗಬೇಕು ಎಂದು ಅವರು ಹೇಳಿದ್ದರು. ಜಾಗತಿಕ ಆಟಿಕೆ ಉದ್ಯಮವು 7 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ. ಆದರೆ ಭಾರತದ ಪಾಲು ತುಂಬಾ ಚಿಕ್ಕದಾಗಿದೆ ಮತ್ತು ಅದನ್ನು ಹೆಚ್ಚಿಸಲು ರಾಷ್ಟ್ರವು ಶ್ರಮಿಸಬೇಕಾಗುತ್ತದೆ ಎಂದಿದ್ದರು.
ಕಾರ್ಯಕ್ರಮವನ್ನು ಆಲ್ ಇಂಡಿಯಾ ರೆಡಿಯೋ, ಡಿಡಿ ನ್ಯೂಸ್, ಪಿಎಂಒ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್ ಚಾನಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.