ನವದೆಹಲಿ:ದೆಹಲಿ ಸರ್ಕಾರ, ಕೇಂದ್ರದ ಪ್ರಧಾನಮಂತ್ರಿ ಆವಾಸ್ ಯೋಜನೆ ಜಾರಿ ಮಾಡಲು ಬಿಡಲಿಲ್ಲ. ಅವರು ಅಧಿಕಾರದಲ್ಲಿ ಇರುವವರೆಗೂ ಕಲ್ಯಾಣ ಯೋಜನೆಗಳನ್ನ ಜಾರಿ ಮಾಡಲು ಬಿಡುವುದಿಲ್ಲ. ರಾಜಕೀಯ ಬಿಟ್ಟು ಅವರಿಗೆ ಬೇರೇನೂ ಗೊತ್ತಿಲ್ಲ ಎಂದು ಕೇಜ್ರಿವಾಲ್ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಕಾರ್ಡೂಮಾದಲ್ಲಿ ನಡೆಯತ್ತಿರುವ ಬೃಹತ್ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ಮೋದಿ, ಎಲ್ಲಿ ಜನರು ನಾನು ನೀಡಿದ ಭರವಸೆ ಏನು? ಅವುಗಳಲ್ಲಿ ಎಷ್ಟು ಭರವಸೆ ಈಡೇರಿಸಿದ್ದಾರೆ ಎಂದು ಪ್ರಶ್ನೆ ಮಾಡುತ್ತಾರೋ? ಎಂಬ ಉದ್ದೇಶದಿಂದ ಆಮ್ ಆದ್ಮಿ ಪಕ್ಷ ವೆಬ್ಸೈಟ್ನಿಂದ ತಮ್ಮ ಹಳೆಯ ಪ್ರಣಾಳಿಕೆಯನ್ನ ತೆಗೆದುಹಾಕಿದೆ. 'ಕೇಜ್ರಿವಾಲ್ ಸರ್ ನೀವು ಪ್ರಣಾಳಿಕೆಯನ್ನ ಬಚ್ಚಿಡಿ ಆದರೆ, ದೆಹಲಿ ಜನತೆ ಮತ್ತು ನಾನು, ಪ್ರಶ್ನೆ ಮಾಡುವುದನ್ನ ನಿಲ್ಲಿಸುವುದಿಲ್ಲ ಎಂದು ಮೋದಿ ಹೇಳಿದರು.
70 ವರ್ಷಗಳ ನಂತರ 370ನೇ ವಿಧಿ ರಧುಗೊಳಿಸಲಾಯ್ತು. 70 ವರ್ಷಗಳ ನಂತರ ರಾಮ ಜನ್ಮಭೂಮಿ ತೀರ್ಪು ಬಂತು. 70 ವರ್ಷಗಳ ನಂರತ ಕರ್ತಾರ್ಪುರ್ ಕಾರಿಡಾರ್ ಬಂದಿದೆ. ಭಾರತ ಮತ್ತು ಬಾಂಗ್ಲಾ ಗಡಿ ಸಮಸ್ಯೆ ಇತ್ಯರ್ಥವಾಗಲು 70 ವರ್ಷ ಬೇಕಾಯ್ತು. ಸಿಎಎ ಜಾರಿಗೆ ಬರಲು 70 ವರ್ಷ ಬೇಕಾಯ್ತು. 50-60 ವರ್ಷಗಳ ನಂತರ ಯುದ್ಧ ಸ್ಮಾರಕ ಮತ್ತು ಪೊಲೀಸ್ ಸ್ಮಾರಕ ನಿರ್ಮಾಣ ಮಾಡಲಾಯ್ತು ಎಂದು ಮೋದಿ ಹೇಳಿದ್ದಾರೆ.