ಕರ್ನಾಟಕ

karnataka

ETV Bharat / bharat

ಬೈಡನ್​ಗೆ ಮೋದಿ ಅಭಿನಂದನೆ: ಕಾರ್ಯತಂತ್ರಾತ್ಮಕ ಸಹಭಾಗಿತ್ವ ಮುಂದುವರಿಕೆ ಬಗ್ಗೆ ಚರ್ಚೆ - ಪ್ರಧಾನಿ ನರೇಂದ್ರ ಮೋದಿ ಟ್ವೀಟ್

ಕೋವಿಡ್​-19 ಸಾಂಕ್ರಾಮಿಕ, ಹವಾಮಾನ ಬದಲಾವಣೆ ಮತ್ತು ಇಂಡೋ-ಪೆಸಿಫಿಕ್ ಭಾಗದಲ್ಲಿನ ಸಹಕಾರ ವೃದ್ಧಿ ಕುರಿತಂತೆ ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡನ್ ಜೊತೆ ಪಿಎಂ ಮೋದಿ ಚರ್ಚಿಸಿದರು.

pm-modi-speaks-to-us-president-elect-joe-biden-discusses-cooperation
ಬೈಡನ್​ ಜೊತೆ ಮೋದಿ ಮಾತುಕತೆ

By

Published : Nov 18, 2020, 2:46 AM IST

Updated : Nov 18, 2020, 4:54 AM IST

ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡನ್ ಅವರಿಗೆ ದೂರವಾಣಿ ಕರೆ ಮೂಲಕ ಅಭಿನಂದಿಸಿದ್ದಾರೆ. ಇದೇ ವೇಳೆ ಇಂಡೋ-ಯುಎಸ್ ಕಾರ್ಯತಂತ್ರದ ಸಹಭಾಗಿತ್ವದ ಕುರಿತಂತೆ ದೃಢವಾದ ಬದ್ಧತೆ ಮುಂದುವರಿಸುವ ಹಾಗೂ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಚರ್ಚಿಸಿದ್ದಾರೆ.

ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ. ಅಲ್ಲದೆ ಕೋವಿಡ್​-19 ಸಾಂಕ್ರಾಮಿಕ, ಹವಾಮಾನ ಬದಲಾವಣೆ ಮತ್ತು ಇಂಡೋ-ಪೆಸಿಫಿಕ್ ಭಾಗದಲ್ಲಿನ ಸಹಕಾರ ವೃದ್ಧಿ ಕುರಿತಂತೆ ಮಾತನಾಡಿರುವುದಾಗಿ ಎಂದು ಪಿಎಂ ತಿಳಿಸಿದ್ದಾರೆ.

ಮತ್ತೊಂದು ಟ್ವೀಟ್​​ ಮೂಲಕ ಯುಸ್​ ಉಪಾಧ್ಯಕ್ಷರಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್ ಅವರಿಗೆ ಮೋದಿ ಅಭಿನಂದನೆ ತಿಳಿಸಿದ್ದಾರೆ. ಕಮಲಾ ಹ್ಯಾರಿಸ್ ಅವರ ಯಶಸ್ಸು ಇಂಡೋ-ಯುಎಸ್ ಸಂಬಂಧಕ್ಕೆ ಇನ್ನಷ್ಟು ಶಕ್ತಿ ನೀಡಲಿದೆ. ಅವರ ಗೆಲುವು ಭಾರತೀಯ-ಅಮೆರಿಕನ್ ಸಮುದಾಯದ ಸದಸ್ಯರಿಗೆ ಬಹಳ ಹೆಮ್ಮೆ ಮತ್ತು ಪ್ರೇರಣೆಯಾಗಿದೆ ಎಂದು ಪಿಎಂ ಹೇಳಿದ್ದಾರೆ.

ಬೈಡನ್ ಗೆಲುವು ಘೋಷಣೆಯಾದ ಬಳಿಕ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ. ಉಭಯ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯಲು, ಮತ್ತೊಮ್ಮೆ ಯುಎಸ್ ನಾಯಕನೊಂದಿಗೆ ನಿಕಟ ಕಾರ್ಯ ನಿರ್ವಹಿಸಲು ಎದುರು ನೋಡುತ್ತಿದ್ದೇನೆ. ಇಂಡೋ-ಯುಎಸ್ ಸಂಬಂಧವನ್ನು ಬಲಪಡಿಸಲು ಈ ಹಿಂದೆ ಉಪಾಧ್ಯಕ್ಷರಾಗಿದ್ದ ವೇಳೆ ಬೈಡನ್​ ನೀಡಿದ ಕೊಡುಗೆ ನಿರ್ಣಾಯಕ ಮತ್ತು ಅಮೂಲ್ಯವಾದವು ಎಂದು ಅವರು ಹೇಳಿದ್ದಾರೆ.

Last Updated : Nov 18, 2020, 4:54 AM IST

ABOUT THE AUTHOR

...view details