ಕರ್ನಾಟಕ

karnataka

ETV Bharat / bharat

ಇಂದು ಇಂದಿರಾ ಗಾಂಧಿ ಪುಣ್ಯತಿಥಿ... ಮೋದಿ, ಸೋನಿಯಾ, ಡಾ. ಸಿಂಗ್​ರಿಂದ​ ಗೌರವ ನಮನ

ಅಂಗರಕ್ಷಕರಿಂದಲೇ 1884ರ ಅಕ್ಟೋಬರ್ 31ರಂದು ಹತ್ಯೆಗೀಡಾಗಿದ್ದ ದಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 35ನೇ ಪುಣ್ಯತಿಥಿಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸೇರಿದಂತೆ ಹಲವು ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.

ಇಂದಿರಾ ಗಾಂಧಿ

By

Published : Oct 31, 2019, 11:20 AM IST

Updated : Oct 31, 2019, 12:33 PM IST

ನವದೆಹಲಿ: ದಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 35ನೇ ಪುಣ್ಯತಿಥಿಗೆ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸೇರಿದಂತೆ ಹಲವು ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.

ಸೋನಿಯಾ ಗಾಂಧಿ, ಡಾ. ಸಿಂಗ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ದೆಹಲಿಯ ಶಕ್ತಿ ಕೇಂದ್ರ ಸ್ಥಳದಲ್ಲಿರುವ ಇಂದಿರಾ ಗಾಂಧಿ ಸಮಾಧಿಗೆ ತೆರಳಿ ನಮನ ಸಲ್ಲಿಸಿದರು. ಪ್ರಧಾನಿ ಮೋದಿ 'ದೇಶದ ಈ ಹಿಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ವಿನಯ ಪೂರ್ವಕ ಶ್ರದ್ಧಾಂಜಲಿ' ಎಂದು ಟ್ವೀಟ್ ಮಾಡಿದ್ದಾರೆ.

ವಿದೇಶ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಸಹ ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದು, 'ಇಂದು ನನ್ನ ಅಜ್ಜಿಯ ಪುಣ್ಯತಿಥಿ. ಅವರ ತತ್ತ್ವಗಳು ನನ್ನ ಜೀವನಕ್ಕೆ ಮಾರ್ಗದರ್ಶನದ ಶಕ್ತಿಯಾಗಿವೆ. ನಿಮ್ಮ ಕಬ್ಬಿಣದಂತಹ ಧೈರ್ಯದ ನಿರ್ಧಾರಗಳು ನನಗೆ ಪ್ರತಿ ಹೆಜ್ಜೆಯಲ್ಲಿಯೂ ಮಾರ್ಗದರ್ಶನವಾಗಿದೆ' ಎಂದು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ.

ಇಂದಿರಾ ಗಾಂಧಿಯವರು ಭಾರತದ ಮೊದಲ ಮಹಿಳಾ ಪ್ರಧಾನಿ. ಅವರು 1966ರಿಂದ 1977ರವರೆಗೆ ಮತ್ತು 1980ರಿಂದ ಅವರ ಹತ್ಯೆ 1984ರವರೆಗೆ ಪ್ರಧಾನಿಯಾಗಿ ಅಧಿಕಾರ ನಡೆಸಿದ್ದರು. ಅವರ ಅಂಗರಕ್ಷಕರಿಂದಲೇ ಅವರು 1884ರ ಅಕ್ಟೋಬರ್ 31ರಂದು ಹತ್ಯೆಗೀಡಾಗಿದ್ದರು.

Last Updated : Oct 31, 2019, 12:33 PM IST

ABOUT THE AUTHOR

...view details