ಕರ್ನಾಟಕ

karnataka

ETV Bharat / bharat

ಹಣದುಬ್ಬರ ಸಮಸ್ಯೆ: ವಿಪಕ್ಷಗಳ ಸಭೆ ಕರೆಯಲು ಪ್ರಧಾನಿಗೆ ಕಾಂಗ್ರೆಸ್​ ಆಗ್ರಹ - ಪ್ರಧಾನಿ ನರೇಂದ್ರ ಮೋದಿ

ದೇಶದಲ್ಲಿ ಹಣದುಬ್ಬರ ಸಮಸ್ಯೆ ಹೆಚ್ಚಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿದ್ದಾರೆ. ಇದರಿಂದ ದೇಶದ ಲಕ್ಷಾಂತರ ಮನೆಗಳಲ್ಲಿ ಜನರು ದಿನನಿತ್ಯದ ಆಹಾರದ ಬಜೆಟ್​ ಮತ್ತು ಪೌಷ್ಠಿಕ ಆಹಾರದ ಬಜೆಟ್​ನಲ್ಲಿ ಕಡಿತಗೊಳಿಸಿದ್ದಾರೆ. ಆದ್ದರಿಂದ ಈ ಬಗ್ಗೆ ಚರ್ಚೆ ನಡೆಸಲು ವಿಪಕ್ಷಗಳ ಸಭೆ ಕರೆಯಬೇಕು ಎಂದು ಕಾಂಗ್ರೆಸ್​ ಆಗ್ರಹಿಸಿದೆ.

Congress leader Randeep Singh
ವಿಪಕ್ಷಗಳ ಸಭೆ ಕರೆಯಲು ಪ್ರಧಾನಿಗೆ ಕಾಂಗ್ರೆಸ್​ ಆಗ್ರಹ

By

Published : Jan 16, 2020, 12:15 PM IST

ನವದೆಹಲಿ:ದೇಶದಲ್ಲಿ ಹಣದುಬ್ಬರ ಸಮಸ್ಯೆ ಹೆಚ್ಚಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿದ್ದಾರೆ. ಆದ್ದರಿಂದ ಮುಂದಿನ ಮೂವತ್ತು ದಿನಗಳ ಒಳಗಾಗಿ ದಿನ ಬಳಕೆಯ ವಸ್ತುಗಳಾದ ಅಡುಗೆ ಎಣ್ಣೆ, ತರಕಾರಿ, ಆಹಾರ ಮತ್ತು ತಂಪುಪಾನಿಯಗಳ ದರವನ್ನು ಹೇಗೆ ಕಡಿಮೆ ಮಾಡಬಹುದು ಎಂಬುವುದರ ಬಗ್ಗೆ ಚರ್ಚಿಸಲು ವಿಪಕ್ಷಗಳ ಸಭೆ ಕರೆಯಬೇಕು ಎಂದು ಕಾಂಗ್ರೆಸ್​ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್​ ನಾಯಕ ರಣದೀಪ್ ಸಿಂಗ್​ ಸುರ್ಜೇವಾಲ, ಹಣದುಬ್ಬರ ಮತ್ತು ನಿರುದ್ಯೋಗ ದೇಶದ ದೊಡ್ಡ ಸಮಸ್ಯೆಗಳಾಗಿವೆ . ಚಿಲ್ಲರೆ ಹಣದುಬ್ಬರವು 2013 ರ ಮಟ್ಟವನ್ನು ಮೀರಿದ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ. ಕಳೆದ ಒಂಬತ್ತು ತಿಂಗಳಲ್ಲಿ, ಹಣದುಬ್ಬರವು ಪ್ರತಿ ತಿಂಗಳು ವೇಗವಾಗಿ ಏರುತ್ತಿದೆ. ಆದರೆ ಪ್ರಧಾನಿ ಮಾತ್ರ ಮೌನವಾಗಿದ್ದಾರೆ. ಜುಲೈ 2019 ರಲ್ಲಿ ಶೇ. 3.15 ಆಗಸ್ಟ್​ನಲ್ಲಿ ಶೇ. 3.28, ಸೆಪ್ಟೆಂಬರ್ ಶೇ.4, ಅಕ್ಟೋಬರ್​ನಲ್ಲಿ ಶೇ. 4.62 , ನವೆಂಬರ್​ನಲ್ಲಿ ಶೇ. 5.54 , ಡಿಸೆಂಬರ್​ನಲ್ಲಿ ಶೇ. 7.35 ಮತ್ತು ಈಗ ಶೇ. 8 ತಲುಪಿದೆ ಎಂದು ಹೇಳಿದರು .

ತರಕಾರಿ ಬೆಲೆಗಳು ಶೇ. 60ರಷ್ಟು, ದ್ವಿದಳ ಧಾನ್ಯಗಳ ಬೆಲೆ ಶೇ15.5 ಕ್ಕಿಂತ ಹೆಚ್ಚಾಗಿದೆ. ಆಹಾರ ಮತ್ತು ಪಾನೀಯಗಳು ಶೇ.12.5 ರಷ್ಟು, ಮಾಂಸ ಮತ್ತು ಮೀನು ಶೇ.10 ರಷ್ಟು ಏರಿಕೆಯಾಗಿದೆ ಮತ್ತು ಮಸಾಲೆಗಳ ಬೆಲೆ ಶೇ 6 ರಷ್ಟು ಏರಿಕೆಯಾಗಿದೆ. 2014ರಲ್ಲಿ 8 ರೂ.ಗೆ ದೊರೆಯುತ್ತಿದ್ದ ಈರುಳ್ಳಿ ದರ ಇಂದು ಕೆ.ಜಿಗೆ 58 ರೂ.ಮಾರಾಟವಾಗುತ್ತಿದೆ. ಟೊಮೇಟೊ ಕೆ.ಜಿ 39 ರೂ. ಆಲೂಗಡ್ಡೆ ಕೆ.ಜಿ 29 ರೂ. ಹೂಕೋಸು ಕೆ.ಜಿ 58. ಮತ್ತು ಬೆಳ್ಳುಳ್ಳಿ ಕೆ.ಜಿ.ಗೆ 290 ರೂ. ತಲುಪಿದೆ. ಇದರಿಂದ ದೇಶದ ಲಕ್ಷಾಂತರ ಮನೆಗಳಲ್ಲಿ ಜನರು ದಿನನಿತ್ಯದ ಆಹಾರದ ಬಜೆಟ್​ ಮತ್ತು ಪೌಷ್ಠಿಕ ಆಹಾರದ ಬಜೆಟ್​ನಲ್ಲಿ ಕಡಿತಗೊಳಿಸಿದ್ದಾರೆ ಎಂದರು.

ಭಾರತವು ಹಿಂದೆಂದೂ ಕಂಡು ಕೇಳರಿಯದ ಹಣದುಬ್ಬರ ಮತ್ತು ಆಹಾರ ಬೆಲೆಗಳ ಸಮಸ್ಯೆಯಲ್ಲಿದೆ. ಆದರೆ, ಪ್ರಧಾನಿ ಸಂಪೂರ್ಣವಾಗಿ ಮೌನವಾಗಿದ್ದಾರೆ. ಆದ್ದರಿಂದ ಪ್ರಧಾನಮಂತ್ರಿ ಎಲ್ಲಾ ವಿರೋಧ ಪಕ್ಷದ ನಾಯಕರ ಸಭೆಯನ್ನು ಕರೆದು ಮುಂದಿನ 15 ಅಥವಾ 30 ದಿನಗಳ ಒಳಗೆ ಅಡುಗೆ ಎಣ್ಣೆ, ತರಕಾರಿಗಳು, ಆಹಾರ ಮತ್ತು ಪಾನೀಯಗಳು, ದ್ವಿದಳ ಧಾನ್ಯಗಳು, ಮಸಾಲೆ ಪದಾರ್ಥಗಳನ್ನು ಬೆಲೆಯನ್ನು ಹೇಗೆ ಸರಿದಾರಿಗೆ ತರಬಹುದು ಎಂಬವುದರ ಬಗ್ಗೆ ಚರ್ಚಿಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ABOUT THE AUTHOR

...view details