ಕೆವಾಡಿಯಾ(ಗುಜರಾತ್):ರಾಷ್ಟ್ರೀಯ ಏಕತಾ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಕೆವಾಡಿಯಾದಲ್ಲಿನ ಸರ್ದಾರ್ ವಲ್ಲಭಭಾಯ್ ಪಟೇಲ್ ಏಕತಾ ಪ್ರತಿಮೆಗೆ ಭೇಟಿ ನೀಡಿ ಅವರ 145ನೇ ಜನ್ಮ ದಿನಾಚರಣೆ ಪ್ರಯುಕ್ತ ಗೌರವ ಸಲ್ಲಿಸಿದರು.
ರಾಷ್ಟ್ರೀಯ ಏಕತಾ ದಿನ ಎಂದೂ ಕರೆಯಲ್ಪಡುವ ರಾಷ್ಟ್ರೀಯ ಏಕ್ತಾ ದಿವಾಸ್ಅನ್ನು ಭಾರತದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ನೆನಪಿಗಾಗಿ ಆಚರಿಸಲಾಗುತ್ತದೆ. ಇದೇ ವೇಳೆ 'ರಾಷ್ಟ್ರೀಯ ಏಕ್ತಾ ದಿವಾಸ್' ಮೆರವಣಿಗೆಗೆ ಪ್ರಧಾನಿ ಮೋದಿ ಸಾಕ್ಷಿಯಾಗಿದ್ದಾರೆ.
ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಮೋದಿ, "ತಮ್ಮ ಜನ್ಮ ವಾರ್ಷಿಕೋತ್ಸವದಂದು ರಾಷ್ಟ್ರೀಯ ಐಕ್ಯತೆ ಮತ್ತು ಸಮಗ್ರತೆಯ ಪ್ರವರ್ತಕ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಗೌರವ ಸಲ್ಲಿಸುತ್ತೇನೆ" ಎಂದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ, "ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಇರುವ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಜೀ ಅವರಿಗೆ ಸಲ್ಯೂಟ್. ಸ್ವಾತಂತ್ರ್ಯದ ನಂತರ ನೂರಾರು ರಾಜಪ್ರಭುತ್ವಗಳಲ್ಲಿ ಚದುರಿದ್ದ ಭಾರತವನ್ನು ಒಂದುಗೂಡಿಸಿ, ಇಂದಿನ ಪ್ರಬಲ ಭಾರತಕ್ಕೆ ಅಡಿಪಾಯ ಹಾಕಿದರು. ಭಾರತವು ಅವರ ಅಚಲ ನಾಯಕತ್ವ, ರಾಷ್ಟ್ರೀಯ ಸಮರ್ಪಣೆಯನ್ನು ಎಂದಿಗೂ ಮರೆಯುವುದಿಲ್ಲ" ಎಂದಿದ್ದಾರೆ.