ಕರ್ನಾಟಕ

karnataka

ETV Bharat / bharat

ಪ್ಯಾರೇ ದೇಶ್‌ವಾಸಿಯೋ.. ಅಗಸ್ಟ್ 29ಕ್ಕೆ ಪ್ರಧಾನಿ ಮೋದಿ ಮಹತ್ವದ ಘೋಷಣೆ!

ಫಿಟ್ ಇಂಡಿಯಾ ಹಾಗೂ ಮಹಾತ್ಮ ಗಾಂಧಿ 150ನೇ ಹುಟ್ಟುಹಬ್ಬ ಆಚರಣೆ, ಪ್ಲಾಸ್ಟಿಕ್ ನಿರ್ಮೂಲನೆ ಹಾಗೂ ಸ್ವಚ್ಛ ಭಾರತ ಪ್ರಧಾನಿ ಮೋದಿಯ ಇಂದಿನ 'ಮನ್​ ಕಿ ಬಾತ್'ನ ಪ್ರಮುಖಾಂಶಗಳು.

ಪ್ರಧಾನಿ ಮೋದಿ ಮನ್​ ಕಿ ಬಾತ್

By

Published : Aug 25, 2019, 1:10 PM IST

ನವದೆಹಲಿ: ದೇಶದ ಜನತೆಯನ್ನು ಉದ್ದೇಶಿಸಿ ಮನ್​ ಕಿ ಬಾತ್​ ಮೂಲಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಹಲವು ವಿಚಾರಗಳನ್ನು ಕೇಳುಗರ ಮುಂದಿಟ್ಟಿದ್ದಾರೆ.

ಫಿಟ್ ಇಂಡಿಯಾ ಹಾಗೂ ಮಹಾತ್ಮ ಗಾಂಧಿ 150ನೇ ಹುಟ್ಟುಹಬ್ಬ ಆಚರಣೆ, ಪ್ಲಾಸ್ಟಿಕ್ ನಿರ್ಮೂಲನೆ ಹಾಗೂ ಸ್ವಚ್ಛ ಭಾರತ ಪ್ರಧಾನಿ ಮೋದಿಯ ಇಂದಿನ 'ಮನ್​ ಕಿ ಬಾತ್' ಪ್ರಮುಖಾಂಶಗಳು.ಆರೋಗ್ಯಕರ ಭಾರತಕ್ಕಾಗಿ ಅಗಸ್ಟ್ 29ರಂದು ಫಿಟ್ ಇಂಡಿಯಾ ಎನ್ನುವ ಹೊಸ ಅಭಿಯಾನ ಪ್ರಾರಂಭಿಸುವ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ.

ಫಿಟ್ ಇಂಡಿಯಾದಲ್ಲಿ ಮಕ್ಕಳು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲ ವಯೋಮಾನದವರೂ ಪಾಲ್ಗೊಳ್ಳಬಹುದು ಎಂದಿರುವ ಪ್ರಧಾನಿ, ಅಗಸ್ಟ್ 29ರಂದು ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.ಅಕ್ಟೋಬರ್​ 2ರಂದು ಮಹಾತ್ಮ ಗಾಂಧಿಯ 150 ಜನ್ಮದಿನ ಆಚರಣೆಗೆ ಇಡೀ ದೇಶವೇ ಸಿದ್ಧವಾಗುತ್ತಿದೆ. ಇದು ಬಹುದೊಡ್ಡ ಹಬ್ಬ ಎಂದು ಪ್ರಧಾನಿ ಮೋದಿ ಉಲ್ಲೇಖ ಮಾಡಿದ್ದಾರೆ.

ABOUT THE AUTHOR

...view details