ನವದೆಹಲಿ: ಸದಾ ಹೊಸತನಕ್ಕೆ ತುಡಿಯುವ ಮತ್ತು ತನ್ನನ್ನು ಪ್ರಯೋಗಗಳಿಗೆ ಒಡ್ಡುವ ಪ್ರಧಾನಿ ಮೋದಿ ಈ ಬಾರಿ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ.
ಪ್ರಸಿದ್ಧ ಇಂಗ್ಲಿಷ್ ಟಿವಿ ಶೋ, ಮ್ಯಾನ್ ವರ್ಸಸ್ ವೈಲ್ಡ್ನಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದು ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಶೋ ನಿರೂಪಕ ಬೇರ್ ಗ್ರಿಲ್ಸ್ ಟೀಸರ್ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
'ಏಕ್ ಥಾ ಟೈಗರ್'ನಿಂದ 'ಟೈಗರ್ ಜಿಂದಾ ಹೇ'ವರೆಗೆ...! ಹುಲಿಗಳ ವಾಸಕ್ಕೆ ವಿಶ್ವದಲ್ಲಿ ಭಾರತವೇ ಬೆಸ್ಟ್..!
ಭಾರತದ ದಟ್ಟಕಾಡುಗಳಲ್ಲಿ ಮೋದಿ ಓಡಾಡಲಿದ್ದು, ಈ ಮೂಲಕ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಿದ್ದಾರೆ. ಈ ಕಾರ್ಯಕ್ರಮದ ಮೂಲಕ 180 ದೇಶದಲ್ಲಿರುವ ಜನರು ಪ್ರಧಾನಿ ಮೋದಿಯವರ ಮತ್ತೊಂದು ಮುಖವನ್ನು ನೋಡಲಿದ್ದಾರೆ ಎಂದು ಬೇರ್ ಗ್ರಿಲ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಮೋದಿ ಬೋಟ್ ರೈಡ್ ಸೇರಿದಂತೆ ವಿವಿಧ ರೀತಿಯಲ್ಲಿ ಕಾಡಿನಲ್ಲಿ ಪ್ರಯಾಣ ಮಾಡಲಿದ್ದಾರೆ. ಶೋ ನಿರೂಪಕ ಬೇರ್ ಗ್ರಿಲ್ಸ್ ಮೋದಿಗೆ ಕಾಡಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಲಿದ್ದಾರೆ ಎನ್ನುವುದು ಟೀಸರ್ನಿಂದ ತಿಳಿದು ಬಂದಿದೆ. ಪ್ರಧಾನಿ ಮೋದಿ ಹಾಗೂ ಬೇರ್ ಗ್ರಿಲ್ ಜೊತೆಯಾಗಿ ನಡೆಸಿಕೊಟ್ಟಿರುವ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮ ಡಿಸ್ಕವರಿ ಚಾನೆಲ್ನಲ್ಲಿ ಆಗಸ್ಟ್ 12ರ ರಾತ್ರಿ ಒಂಭತ್ತು ಗಂಟೆಗೆ ಪ್ರಸಾರವಾಗಲಿದೆ.