ಕರ್ನಾಟಕ

karnataka

By

Published : Sep 25, 2019, 7:03 AM IST

ETV Bharat / bharat

'ಸ್ವಚ್ಛ ಭಾರತ ಅಭಿಯಾನ'ಕ್ಕಾಗಿ ಪ್ರಧಾನಿ ಮೋದಿಗೆ 'ಗ್ಲೋಬಲ್​​​​ ಗೋಲ್​ಕೀಪರ್​​' ಪ್ರಶಸ್ತಿ ಗೌರವ

ದೇಶದಲ್ಲಿ 'ಸ್ವಚ್ಛ ಭಾರತ ಅಭಿಯಾನ'ದ ಯಶಸ್ವಿ ಅನುಷ್ಠಾನಕ್ಕಾಗಿ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ 'ಗ್ಲೋಬಲ್​ ಗೋಲ್​ಕೀಪರ್' ಪ್ರಶಸ್ತಿ ನೀಡಿ ಗೌರವಿಸಿದೆ.

ಮೋದಿಗೆ 'ಗ್ಲೋಬಲ್​ ಗೋಲ್​ಕೀಪರ್' ಪ್ರಶಸ್ತಿ

ನ್ಯೂಯಾರ್ಕ್​: ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ 'ಗ್ಲೋಬಲ್​ ಗೋಲ್​ಕೀಪರ್' ಪ್ರಶಸ್ತಿ ನೀಡಿ ಗೌರವಿಸಿದೆ.

ದೇಶದಲ್ಲಿ 'ಸ್ವಚ್ಛ ಭಾರತ ಅಭಿಯಾನ'ದ ಯಶಸ್ವಿ ಅನುಷ್ಠಾನಕ್ಕಾಗಿ ಈ ಪ್ರಶಸ್ತಿಯನ್ನು ಮೋದಿಗೆ ನೀಡಲಾಗಿದೆ.

ಜಗತ್ತಿನಲ್ಲಿ ಬಡತನವನ್ನು ಕೊನೆಗೊಳಿಸಿ ಅಸಮಾನತೆ ವಿರುದ್ಧ ಹೋರಾಡಲು ಹಾಗೂ ಪ್ರಗತಿಯನ್ನು ವೇಗಗೊಳಿಸಲು ಜಾಗತಿಕ ನಾಯಕರನ್ನು ಒಟ್ಟುಗೂಡಿಸುವ ಸಲುವಾಗಿ ಗೋಲ್​ಕೀಪರ್ಸ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್​ನ ಸಂಘಟಕರು ತಿಳಿಸಿದ್ದಾರೆ.

ಮಹಾತ್ಮಾ ಗಾಂಧಿಯವರ 150ನೇ ಜನ್ಮ ಶತಮಾನೋತ್ಸವದ ಅಂಗವಾಗಿ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿದರು. ಈ ಅಭಿಯಾನದ ಮೂಲಕ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಮತ್ತು ಹಳ್ಳಿಗಳನ್ನು ಮಾಲಿನ್ಯ ಮತ್ತು ಬಯಲು ಶೌಚ ಮುಕ್ತಗೊಳಿಸುವ ಮೂಲಕ ಸ್ವಚ್ಛತೆಯನ್ನು ಸುಧಾರಿಸುವ ಪ್ರಯತ್ನ ಮಾಡಲಾಯ್ತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಧಾನಿ ಮೋದಿ, ಮಹಾತ್ಮಾ ಗಾಂಧಿಯವರು ಕಂಡಿದ್ದ ಸ್ವಚ್ಛತೆಯ ಕನಸು ಈಗ ನನಸಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ, ಈ ಅಭಿಯಾನದಿಂದ ಸುಮಾರು ಮೂರು ಲಕ್ಷ ಜನರನ್ನು ಉಳಿಸಲಾಗಿದೆ. ದೇಶದ ಶಾಲೆಗಳಲ್ಲಿ ಶೌಚಾಲಯಗಳಿಲ್ಲ ಎಂಬ ಕಾರಣದಿಂದ ಹೆಣ್ಣುಮಕ್ಕಳು ಶಾಲೆ ತೊರೆಯುವಂತಾಗುತ್ತಿತ್ತು. ಆದರೆ ಈ ಅಭಿಯಾನ ಎಲ್ಲವನ್ನೂ ಬದಲು ಮಾಡಿದೆ ಎಂದು ಮೋದಿ ಹೇಳಿದರು.

ABOUT THE AUTHOR

...view details