ಕರ್ನಾಟಕ

karnataka

ETV Bharat / bharat

ಹ್ಯೂಸ್ಟನ್​ ತಲುಪಿದ ಪಿಎಂ ಮೋದಿ: ಪ್ರತಿಭಟನೆಗೆ ಮುಂದಾದ ಪಾಕಿಗಳು - Howdy Modi

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹ್ಯೂಸ್ಟನ್​ ತಲುಪಿದ್ದು, ನಾಳೆ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮತ್ತೊಂದೆಡೆ ಮೋದಿ ವಿರೋಧಿಸಿ ಪಾಕಿಸ್ತಾನಿಗರು, ಕಾಶ್ಮೀರಿಗಳು ಹಾಗೂ ಸಿಖ್​ ಸಮುದಾಯದವರು ಒಟ್ಟಾಗಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ

By

Published : Sep 21, 2019, 11:52 PM IST

ಹ್ಯೂಸ್ಟನ್​:ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹ್ಯೂಸ್ಟನ್​ ತಲುಪಿದ್ದು, ನಾಳೆ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇನ್ನೊಂದೆಡೆ ಪ್ರಧಾನಿ ವಿರುದ್ಧ ಪ್ರತಿಭಟನೆ ನಡೆಸಲು ಅಮೆರಿಕದಲ್ಲಿ ನೆಲೆಸಿರುವ ಪಾಕಿಸ್ತಾನಿಗರು ನಿರ್ಧರಿಸಿದ್ದಾರೆ.

ನಾಳೆ ಹ್ಯೂಸ್ಟನ್​ನಲ್ಲಿ ಹೌಡಿ ಮೋದಿ ಕಾರ್ಯಕ್ರಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕೂಡ ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಆದರೆ ಇನ್ನೊಂದೆಡೆ ಅಮೆರಿಕದಲ್ಲಿ ನೆಲೆಸಿರುವ ಪಾಕಿಸ್ತಾನಿ, ಕಾಶ್ಮೀರಿ ಹಾಗೂ ಸಿಖ್ ಸಮುದಾಯದವರು ಜೊತೆಯಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಪ್ರಧಾನಿ ಮೋದಿಯವರು ಕಾಶ್ಮೀರಿಗರ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂಬುದು ಪ್ರತಿಭಟನಾಕಾರರ ಆರೋಪ. ಅಲ್ಲದೆ ಪ್ರತಿಭಟನೆ ಹಿನ್ನೆಲೆಯಲ್ಲಿ ಬೃಹತ್​ ಟ್ರಕ್​ ರ‍್ಯಾಲಿ ನಡೆಸಿದ್ದು, ಭಾರೀ ಬೆಂಬಲ ವ್ಯಕ್ತವಾಗಿತ್ತು. ಪ್ರತಿಭಟನೆಯಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸುವಂತೆ ಟ್ವೀಟ್​ ಮೂಲಕವೂ ಕೂಡ ಕೆಲವರು ಮನವಿ ಮಾಡಿದ್ದಾರೆ.

ಇನ್ನು ಅಮೆರಿಕ ಮೂಲದ ಕಾಶ್ಮೀರಿ ಕಾರ್ಯಕರ್ತರು ಪ್ರಧಾನಿ ವಿರುದ್ಧ ಹ್ಯೂಸ್ಟನ್​ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಈ ಬಗ್ಗೆ ಪ್ರಧಾನಿಯವರಿಗೆ ಒದಗಿಸಿರುವ ಭದ್ರತೆ ಕುರಿತಂತೆ ಕೇಂದ್ರ ಸರ್ಕಾರವು ಅಮೆರಿಕ ರಾಯಭಾರ ಕಚೇರಿ ಜೊತೆ ಸಂಪರ್ಕದಲ್ಲಿದೆ.

ABOUT THE AUTHOR

...view details