ಕರ್ನಾಟಕ

karnataka

ETV Bharat / bharat

ಬೆಳ್ಳಂಬೆಳಗ್ಗೆ ಕಸ ಆಯ್ದ ಪ್ರಧಾನಿ.. ಸಮುದ್ರ ತೀರದಲ್ಲೂ ಮೋದಿ ಸ್ವಚ್ಛತಾ ಅಭಿಯಾನ! -

ಮಹಾಬಲಿಪುರಂ ಬೀಚ್​ನಲ್ಲಿ ಬೆಳ್ಳಂಬೆಳಗ್ಗೆ ವಾಕಿಂಗ್​ ಮಾಡಿದ ಪ್ರಧಾನಿ ಮೋದಿ ಬೀಚ್​ ದಡದಲ್ಲಿ ಸ್ವಚ್ಛತಾಕಾರ್ಯ ನಡೆಸಿದ್ದಾರೆ.

ಮೋದಿ ಸ್ವಚ್ಛತಾ ಅಭಿಯಾನ

By

Published : Oct 12, 2019, 9:58 AM IST

ಮಹಾಬಲಿಪುರಂ:ಚೀನಾ ಅಧ್ಯಕ್ಷರೊಂದಿಗಿನ ಅನೌಪಚಾರಿಕ ಶೃಂಗಸಭೆಗಾಗಿ ತಮಿಳುನಾಡಿನ ಮಹಾಬಲಿಪುರಂನಲ್ಲಿರುವ ಪ್ರಧಾನಿ ಮೋದಿ ಇಂದು ಬೆಳಗ್ಗೆ ಬೀಚ್​ನಲ್ಲಿ ಸ್ವಚ್ಛತಾಕಾರ್ಯ ನಡೆಸಿದ್ದಾರೆ.

ಬೆಳಗ್ಗೆ ಮಹಾಬಲಿಪುರಂ ಬೀಚ್​ನಲ್ಲಿ ವಾಕಿಂಗ್​ ಮಾಡುತಿದ್ದ ಪ್ರಧಾನಿ ಮೋದಿ ಬೀಚ್​ ದಡದಲ್ಲಿ ಕಸಗಳಿರುವುದನ್ನ ಕಂಡು ಸ್ವತಃ ತಾವೇ ಕಸಗಳನ್ನ ಆರಿಸಿಕೊಂಡು ಒಂದು ಕವರ್​ಗೆ ಹಾಕಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಮೋದಿ, ಬೀಚ್​ ಬಳಿ ಸುಮಾರು 30 ನಿಮಿಷ ಕಾಲ ಕಳೆದ ನಾನು ಕಸವನ್ನ ಆರಿಸಿಕೊಂಡು, ತಾವು ತಂಗಿದ್ದ ಹೋಟೆಲ್ ಸಿಬ್ಬಂದಿ ಜಯರಾಜ್​ಗೆ ನೀಡಿದ್ದೇನೆ. ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತೆ ಕಾಪಡಬೇಕು. ಈ ಮೂಲಕ ನಾವು ಕೂಡ ಆರೋಗ್ಯವಂತರಾಗಿರಬೇಕು ಎಂದು ಬರೆದುಕೊಂಡಿದ್ದಾರೆ.

ABOUT THE AUTHOR

...view details