ನವದೆಹಲಿ:ಮಹಾಮಾರಿ ಕೊರೊನಾ ವೈರಸ್ ಅನೇಕ ವಿಷಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಆದರೆ ದೇಶದ 1.3 ಬಿಲಿಯನ್ ಭಾರತೀಯರ ಆಕಾಂಕ್ಷೆ, ಮಹತ್ವಾಕಾಂಕ್ಷೆಗಳ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಯುಎಸ್-ಇಂಡಿಯಾ ಕಾರ್ಯತಂತ್ರ ಪಾಲುದಾರಿಕೆ ವೇದಿಕೆಯ (USISPF) 3ನೇ ವಾರ್ಷಿಕ ನಾಯಕತ್ವ ಶೃಂಗಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 1.3 ಮಿಲಿಯನ್ ಭಾರತದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿರುವ ಸಾವಿನ ಪ್ರಮಾಣ ಅತೊ ಕಡಿಮೆ ಇದೆ ಎಂದಿದ್ದಾರೆ.
ಯುಎಸ್ಐಎಸ್ಪಿಎಫ್ 3ನೇ ವಾರ್ಷಿಕ ನಾಯಕತ್ವ ಶೃಂಗಸಭೆ ನಮೋ ಭಾಷಣ ಕೋವಿಡ್-19 ಹೊರತುಪಡಿಸಿ ನಾವು, ಪ್ರವಾಹ, ಚಂಡಮಾರುತ, ಮಿಡತೆಗಳ ಹಾವಳಿ ವಿರುದ್ಧ ಯಶಸ್ವಿಯಾಗಿ ಹೋರಾಡಿದ್ದೇವೆ. ಇದು ಜನರನ್ನ ಮತ್ತಷ್ಟು ಬಲಪಡಿಸಿದೆ. ಇದರ ಮೂಲಕ ಕೇಂದ್ರಕ್ಕೆ ಒಂದು ವಿಷಯ ಗೊತ್ತಾಗಿದ್ದು, ಬಡವರನ್ನ ರಕ್ಷಿಸಬೇಕು. ಅದೇ ರೀತಿಯಲ್ಲಿ ನಾವು ಭಾರತೀಯರಿಗೆ ಸಹಾಯ ಮಾಡಿದ್ದೇವೆ. ಭಾರತೀಯರು ಆತ್ಮನಿರ್ಭರ್ ಭಾರತ(ಸ್ವಾವಲಂಬಿ ಭಾರತ) ಧ್ಯೇಯ ಕೈಗೊಂಡಿದ್ದು, ಸ್ಥಳೀಯ ವಸ್ತುಗಳಿಗೆ ಹೆಚ್ಚಿನ ಮನ್ನಣೆ ನೀಡುತ್ತಿದೆ ಎಂದಿರುವ ಅವರು, ಕೋವಿಡ್ ಲಸಿಕೆ ಕಂಡು ಹಿಡಿಯುವಲ್ಲಿ ನಾವು ಹಿಂದೆ ಬಿದ್ದಿಲ್ಲ ಎಂದು ತಿಳಿಸಿದ್ದಾರೆ.
ಆತ್ಮನಿರ್ಭರ್ ಭಾರತದ ಮೂಲಕ ಸ್ಥಳೀಯ ಅಗತ್ಯಗಳ ಹೊರತಾಗಿಯೂ, ಜಾಗತಿಕ ಜವಾಬ್ದಾರಿಗಳಿಂದ ನಾವು ದೂರ ಸರಿಯಲಿಲ್ಲ ಮತ್ತು ಜಗತ್ತಿಗೆ ನಿರಂತರವಾಗಿ ಔಷಧಿಗಳ ಪೂರೈಕೆ ಮಾಡ್ತಿದ್ದೇವೆ ಎಂದಿದ್ದಾರೆ. ಮುಂದಿನ ದಾರಿ ಅವಕಾಶಗಳಿಂದ ತುಂಬಿದ್ದು, ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಮುಕ್ತ ಅವಕಾಶ ಸಿಗಲಿವೆ ಎಂದರು.
ಕೊರೊನಾ ವೈರಸ್ ಏಕಾಏಕಿ ಭಾರತದಲ್ಲಿ ದೊಡ್ಡ ಸವಾಲು ಸೃಷ್ಠಿಸಿದ್ದು, ಇದರ ಜತೆಗೆ ಹೋರಾಟ ನಡೆಸುವ ಜತೆಗೆ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆ ಇದೆ ಎಂದಿದ್ದಾರೆ.ಸದ್ಯ ನಾವು ವಿಶ್ವದ ಎರಡನೇ ಅತಿದೊಡ್ಡ ಪಿಪಿಇ ಕಿಟ್ ತಯಾರಕರಾಗಿದ್ದು, ಒಂದು ಕೊರೊನಾ ವೈರಸ್ ಪರೀಕ್ಷಾ ಪ್ರಯೋಗಾಲಯದಿಂದ ಸದ್ಯ 1600 ಲ್ಯಾಬ್ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 83,833ಕ್ಕೂ ಹೆಚ್ಚು ಕೊರೊನಾ ಟೆಸ್ಟ್ ನಡೆಸಲಾಗಿದ್ದು, ಸದ್ಯ ಭಾರತ ಅತಿ ಹೆಚ್ಚು ಟೆಸ್ಟ್ ನಡೆಸುವ ಮೊದಲ ದೇಶವಾಗಿದೆ ಎಂದು ತಿಳಿಸಿದರು.