ಹೈದರಾಬಾದ್:5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ದೇಶದ ವಿವಿಧಡೆ ಬೆಳಗ್ಗೆಯಿಂದಲೇ ಯೋಗ ಅಭ್ಯಾಸ ಶಿಖರ ಆಯೋಜನೆಗೊಂಡಿವೆ. ಇದರ ಮಧ್ಯೆ ವಿದೇಶಗಳಲ್ಲೂ ಯೋಗ ಕಾರ್ಯಕ್ರಮ ಬೆಳಗ್ಗೆಯಿಂದಲೇ ಆರಂಭಗೊಂಡಿವೆ.
ದೇಶಾದ್ಯಂತ ಇಂದು ಯೋಗಾ ಯೋಗ... ವಿದೇಶಗಳಲ್ಲೂ ಯೋಗ ಶಿಬಿರ ಆಯೋಜನೆ! - ಬಾಬಾ ರಾಮದೇವ್
ದೇಶ-ವಿದೇಶಗಳಲ್ಲೂ ಯೋಗ ಶಿಬಿರಗಳು ಆಯೋಜನೆಗೊಂಡಿದ್ದು, ಜಾರ್ಖಂಡ್ನ ರಾಂಚಿಯಲ್ಲಿ ಪ್ರಧಾನಿ ಮೋದಿ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ವಿವಿದೆಡೆ ಯೋಗಾ ಶಿಬಿರ ಆಯೋಜನೆ
ಯೋಗ ಗುರು ಬಾಬಾ ರಾಮದೇವ್ ಮಹಾರಾಷ್ಟ್ರದ ನಾಂದೇಡ್ದಲ್ಲಿ ಸಿಎಂ ದೇವೇಂದ್ರ ಫಡ್ನವೀಸ್ ಜತೆ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾದರು.
ಜಾರ್ಖಂಡ್ನ ರಾಂಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ವಿಶ್ವಕ್ಕೆ ಇದರ ಮಹತ್ವ ಸಾರಬೇಕಾಗಿದೆ. ಬಡವರ್ಗದ ಜನರಿಗೆ ಯೋಗದಿಂದ ಸಹಾಯವಾಗಲಿದ್ದು, ಮನಸ್ಸನು ಹತೋಟಿಯಲ್ಲಿಟ್ಟುಕೊಳ್ಳಲು ಇದು ಅವಶ್ಯ ಎಂದು ತಿಳಿಸಿದರು. ಇನ್ನು ನೇಪಾಳದಲ್ಲೂ ಯೋಗ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಸಾವಿರಾರು ಜನರು ಶಿಬಿರದಲ್ಲಿ ಭಾಗಿಯಾದರು.
Last Updated : Jun 21, 2019, 7:07 AM IST