ನವದೆಹಲಿ: ಶಿವಸೇನಾ ಸಂಸ್ಥಾಪಕ, ಹಿಂದುತ್ವ ಪ್ರತಿಪಾದಕ ದಿ. ಬಾಳಾ ಸಾಹೇಬ್ ಠಾಕ್ರೆ ಅವರ 95ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ.
"ಶ್ರೀ ಬಾಳಾ ಸಾಹೇಬ್ ಠಾಕ್ರೆ ಅವರಿಗೆ ನಮನಗಳು. ಠಾಕ್ರೆ ಅವರು ಅಚಲರಾಗಿ ತಮ್ಮ ಆದರ್ಶಗಳನ್ನು ಎತ್ತಿಹಿಡಿದಿದ್ದರು. ಜನರ ಕಲ್ಯಾಣಕ್ಕಾಗಿ ದಣಿವಿಲ್ಲದೆ ಸೇವೆ ಸಲ್ಲಿಸಿದ್ದರು" ಎಂದು ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ.
1926ರ ಜನವರಿ 23 ರಂದು ಜನಿಸಿದ ಠಾಕ್ರೆ, 'ಫ್ರೀ ಪ್ರೆಸ್ ಜರ್ನಲ್'ನಲ್ಲಿ ಕಾರ್ಟೂನಿಸ್ಟ್ ಆಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು. ಶಿವಸೇನೆ ಪಕ್ಷ ಸ್ಥಾಪಿಸಲೆಂದೇ 1960ರಲ್ಲಿ ತಮ್ಮ ಉದ್ಯೋಗ ತೊರೆದು, 1966ರ ಜೂನ್ 19ರಂದು ಶಿವಸೇನೆ ಸ್ಥಾಪಿಸಿದರು. ಮರಾಠ ಜನತೆ ಹಾಗೂ ಮಹಾರಾಷ್ಟ್ರದ ಕಲ್ಯಾಣಕ್ಕಾಗಿ ಹೋರಾಡಿದರು.
2012ರ ನವೆಂಬರ್ 17ರಂದು ತಮ್ಮ 86ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು.