ನವದೆಹಲಿ:ಡಿಸ್ಕವರಿ ಚಾನೆಲ್ನ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದು ಈಗ ಹಳೆ ವಿಚಾರ. ಆದರೆ ಈಗ ಹೊಸ ವಿಚಾರ ಏನು ಅಂದ್ರೆ ಪ್ರಧಾನಿ ಮೋದಿ ಭಾಗವಹಿಸಿದ ಎಪಿಸೋಡ್ ವಿಶ್ವದಲ್ಲೇ ಅತೀ ಹೆಚ್ಚು ಟ್ರೆಂಡಿಂಗ್ ಪಡೆದ ಟೆಲಿವಿಷನ್ ಕಾರ್ಯಕ್ರಮ ಎಂಬ ಖ್ಯಾತಿಗೆ ಪಾತ್ರವಾಗಿದೆಯಂತೆ.
ಈ ಕಾರ್ಯಕ್ರಮವನ್ನು ನಿರೂಪಿಸಿದ ಬೇರ್ ಗ್ರಿಲ್ಸ್ ಅವರೇ ಸ್ವತಃ ಈ ವಿಚಾರವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.ಟ್ವಿಟ್ಟರ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಬೇರ್ ಗ್ರಿಲ್ಸ್, 3.6 ಶತಕೋಟಿ ಅಭಿಪ್ರಾಯಗಳನ್ನು ಹೊಂದುವುದರ ಜೊತೆಗೆ ಅಧಿಕೃತವಾಗಿ ಜಗತ್ತಿನಲ್ಲೇ ಅತ್ಯಧಿಕ ಟ್ರೆಂಡಿಂಗ್ ಪಡೆದ ಟೆಲಿವಿಷನ್ ಕಾರ್ಯಕ್ರಮವಿದು.